5, 8 & 9 ನೇ ತರಗತಿ ಮೌಲ್ಯಾಂಕ ಪರೀಕ್ಷೆಗೆ ಸಂಬಂಧಿಸಿದ ವಿವಿಧ ನಮೂನೆಗಳು👇
ವಿಶೇಷ ಸೂಚನೆ : ಮೇಲಿನ ನಮೂನೆಗಳು ಕೇವಲ ಮಾದರಿಗಾಗಿ ಮಾತ್ರ ಕೊಡಲಾಗಿದೆ. ಇವೆ ಅಂತಿಮ ಅಲ್ಲ ನಿಮ್ಮ ಶಾಲಾ ಪರಿಸರಕ್ಕೆ ತಕ್ಕಂತೆ ನಮೂನೆಗಳನ್ನು ಹಾಕಿಕೊಳ್ಳಬಹುದು.
*5ನೇ 8ನೇ ಮತ್ತು 9ನೇ SA2 ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ:*
*KSEEB ಬೆಂಗಳೂರು ಮಂಡಳಿಯಿಂದ 5, 8, 9,ನೇ ಮೌಲ್ಯಂಕನ ಪರೀಕ್ಷೆಯ ಕುರಿತು ಇಂದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ನೀಡಿದ ಮಾಹಿತಿಗಳು*👇👇👇👇
1.*ಪರೀಕ್ಷೆಯ ದಿನಾಂಕ ಮಾರ್ಚ್ 11 ರಿಂದ 18 ಮಧ್ಯಾಹ್ನದ ಅವಧಿ.*
2.*KSEEB ಮಂಡಳಿಯಿಂದ ಕೇವಲ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಎಲ್ಲಾ ಮಕ್ಕಳಿಗೂ ವಿವರಗಳನ್ನು ಕುರಿತ ಫೇಸ್ ಶೀಟ್ ನೀಡಲಾಗುವುದು.*
3.*ಉತ್ತರ ಪತ್ರಿಕೆಗಳನ್ನು ಮಕ್ಕಳ ತರುವುದು. ಮಕ್ಕಳು ತರುವ ಎಲ್ಲಾ ಉತ್ತರ ಪತ್ರಿಕೆಗಳು ಏಕರೂಪದಲ್ಲಿರುವಂತೆ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಮಾಹಿತಿ ನೀಡುವುದು.*
4.*ಮೌಲ್ಯಮಾಪನವನ್ನು ಬ್ಲಾಕ್ ಹಂತದಲ್ಲಿ ನಡೆಸಲಾಗುವುದು.*
5.*ಇಲಾಖೆಯಿಂದ ಸರಬರಾಜಾದ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ನೀಡಿ ಸದರಿ ಪ್ರಶ್ನೆ ಪತ್ರಿಕೆಯ ಕವರ್ ನಲ್ಲಿ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ಮೌಲ್ಯಮಾಪನಕ್ಕೆ ಕಳುಹಿಸುವುದು.*
6.*ಆಯಾ ದಿನದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಅಂದೆ ಸರಬರಾಜು ಮಾಡಲಾಗುವುದು. ಪರೀಕ್ಷೆಯ ನಂತರ ಅದೇ ದಿನ ಆ ವಿಷಯದ ಉತ್ತರ ಪತ್ರಿಕೆಗಳನ್ನು ತಾವು ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡ ಕೇಂದ್ರದಲ್ಲಿಯೇ ಮರಳಿಸುವುದು.*
7.*ದಿ 01-02-24 ರಾ ಸ್ಯಾಟ್ಸ್ ಅಂಕಿ ಅಂಶಗಳ ಮಾಹಿತಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣಕ್ಕೆ ಕಳುಹಿಸಲಾಗಿರುತ್ತದೆ.*
8.*ಮೌಲ್ಯಮಾಪನದ ನಂತರ ಉತ್ತರ ಪತ್ರಿಕೆಗಳನ್ನು ಪಡೆದು ಮುಖ್ಯೋಪಾಧ್ಯಾಯರು ಆನ್ಲೈನ್ ನಲ್ಲಿ ಮಕ್ಕಳ ಗ್ರೇಡ್ಗಳನ್ನು ನಮೂದಿಸುವುದು.*
9.*ದೈಹಿಕ ಶಿಕ್ಷಣ ಪ್ರಶ್ನೆ ಪತ್ರಿಕೆಯು ಸರಬರಾಜು ಆಗುವುದಿಲ್ಲ ತಮ್ಮ ಶಾಲಾ ಹಂತದಲ್ಲಿ ತಾವೇ ಸಿದ್ಧಪಡಿಸಿಕೊಳ್ಳುವುದು 8 ಮತ್ತು 9 ಕ್ಕೆ ಮಾತ್ರ.*
10.*ಮಾರ್ಚ್ 4 ರಿಂದ 7ನೇ ತಾರೀಕಿನೊಳಗೆ ಮೌಖಿಕ ಪರೀಕ್ಷೆಯನ್ನು ಪೂರ್ಣಗೊಳಿಸಿ ಅಂಕವಹಿಗಳನ್ನು ದಾಖಲಿಸಿ ಇಟ್ಟುಕೊಳ್ಳುವುದು. ಮೌಖಿಕ ಪ್ರಶ್ನೆ ಪತ್ರಿಕೆಯನ್ನು ಆಯಾ ವಿಷಯವಾರು ಬೋಧಿಸುವ ಶಿಕ್ಷಕರೇ ತಯಾರಿಸಿಕೊಳ್ಳುವುದು.*
1. ರಾಜ್ಯ ಪಠ್ಯಕ್ರಮದ 5ನೇ, 8ನೇ ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಯೊಂದು ಮಗುವನ್ನೂ ಮೌಲ್ಯಮಾಪನ/ಪರೀಕ್ಷೆ ತೆಗೆದುಕೊಳ್ಳಬೇಕು . SATS ಅಲ್ಲದ ವಿದ್ಯಾರ್ಥಿಗಳನ್ನು ಸಹ ಮೌಲ್ಯಮಾಪನ ತೆಗೆದುಕೊಳ್ಳಬೇಕು.
2. ಪರೀಕ್ಷೆಯ ವೇಳಾಪಟ್ಟಿ ಮತ್ತು ಸಮಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
3. ಒಂದೇ ಮಗು ಇದ್ದರೂ ಶಾಲೆಯೇ ಪರೀಕ್ಷಾ ಕೇಂದ್ರ.
4. ಕೊಠಡಿ ಮೇಲ್ವಿಚಾರಕರು ಅದೇ ಕ್ಲಸ್ಟರ್‌ನ ಇತರ ಶಾಲೆಗಳ ಶಿಕ್ಷಕರಾಗಿರಬೇಕು. ಇದನ್ನು BEO/brcs ಮೂಲಕ ಹಂಚಿಕೆ ಮಾಡಬೇಕು.
5. ಏಕ ಶಿಕ್ಷಕರ ಸಂದರ್ಭದಲ್ಲಿ, BEO ಗಳು ಅನುಕೂಲಕ್ಕೆ ಅನುಗುಣವಾಗಿ ನಿಯೋಜಿಸಬೇಕು ಆದರೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಬೇಕು.
6. NSQF ಮತ್ತು ದೈಹಿಕ ಶಿಕ್ಷಣ ಪ್ರಶ್ನೆ ಪತ್ರಿಕೆಗಳನ್ನು ksqaac ಮೂಲಕ ಸರಬರಾಜು ಮಾಡಲಾಗುವುದಿಲ್ಲ. ಶಾಲೆಗಳು ತಮ್ಮದೇ ಆದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಬೇಕು ಮತ್ತು ಟೈಮ್ ಟೇಬಲ್ ಪ್ರಕಾರ ಪರೀಕ್ಷೆಯನ್ನು ನಡೆಸಬೇಕು.
7. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸವನ್ನು ನೀಡಲು ದಯವಿಟ್ಟು ಮುಖ್ಯಶಿಕ್ಷಕರಿಗೆ ತಿಳಿಸಿ. Crp ರವರು ಎಲ್ಲಾ ಶಾಲೆಯವರು ಮಾದರಿ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸವನ್ನು ನೀಡುವಂತೆ ನೋಡಿಕೊಳ್ಳಬೇಕು
8. ಎಲ್ಲಾ ಪ್ರಶ್ನೆ ಪತ್ರಿಕೆಗಳು ಸಾಮರ್ಥ್ಯಗಳು ಮತ್ತು ಕಲಿಕೆಯ ಫಲಿತಾಂಶಗಳನ್ನು ಆಧರಿಸಿವೆ.
ನೇರ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ.
9. *ಸಿಲಬಸ್* 👇🏻
5 ನೇ: std. : ನವೆಂಬರ್ ನಿಂದ ಫೆಬ್ರವರಿ
8 ನೇ: ತರಗತಿ: ಜೂನ್ ನಿಂದ ಫೆಬ್ರವರಿ
9 ನೇ ತರಗತಿ: ಜೂನ್ ನಿಂದ ಫೆಬ್ರವರಿ
*ಪರೀಕ್ಷಾ ದಿನಾಂಕಗಳು:*
5 ನೇ STD : ಮಾರ್ಚ್ 11 ರಿಂದ 14 ರವರೆಗೆ
8 ಮತ್ತು 9 STD: ಮಾರ್ಚ್ 11 ರಿಂದ 18 ರವರೆಗೆ
ಅಂಕಗಳು
5 ನೇ: 40 +10 ಮೌಖಿಕ
8 ನೇ: 50 +10 ಮೌಖಿಕ
9 ನೇ: 1 ನೇ ಭಾಷೆಗೆ 100 ಮತ್ತು ಇತರ ಎಲ್ಲಾ ವಿಷಯಗಳಿಗೆ 80.
10. ಮೌಲ್ಯಮಾಪನವು ಬ್ಲಾಕ್ ಮಟ್ಟದಲ್ಲಿರುತ್ತದೆ. ಮತ್ತು ಇಂಟರ್ ಕ್ಲಸ್ಟರ್
5 ನೇ ತರಗತಿ ವೇಳಾ ಪಟ್ಟಿ
8 ನೇ ತರಗತಿ ವೇಳಾ ಪಟ್ಟಿ
9 ನೇ ತರಗತಿ ವೇಳಾ ಪಟ್ಟಿ
ಕನ್ನಡ ಮಾಧ್ಯಮದ ಮಾದರಿ ಪ್ರಶ್ನೆ ಪತ್ರಿಕೆಗಳು
5 ನೇ ತರಗತಿ
8 ನೇ ತರಗತಿ
9 ನೇ ತರಗತಿ
ಇಂಗ್ಲೀಷ ಮಾಧ್ಯಮದ ಮಾದರಿ ಪ್ರಶ್ನೆ ಪತ್ರಿಕೆಗಳು
5 ನೇ ತರಗತಿ
8 ನೇ ತರಗತಿ
9 ನೇ ತರಗತಿ
ಇಂಗ್ಲಿಷ Download (1st language)
5, 8 ಮತ್ತು 9 ನೇ ತರಗತಿ ಮೌಲ್ಯಾಂಕನ 2023-24
SATS ನಲ್ಲಿ ಪರಿಶೀಲಿಸಬೇಕಾದ ಅವಶ್ಯಕ ಮಾಹಿತಿ
5, 8 ಮತ್ತು 9 ನೇ ತರಗತಿಗೆ ಸಂಕಲನಾತ್ಮಕ ಮೌಲ್ಯಾಂಕನವನ್ನು (SA - 2) ದಿನಾಂಕ 11.03.2024 ರಂದು ನಡೆಸಲಾಗುತ್ತಿದ್ದು, ಈ ಮೌಲ್ಯಾಂಕನದ ಪ್ರಶ್ನೆ ಪತ್ರಿಕೆ ಮುದ್ರಣಕ್ಕಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು SATS ದಿಂದ ಪಡೆಯಲಾಗುತ್ತಿದ್ದು. ಆದ್ದರಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು 5, 8 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಮಾಹಿತಿಯನ್ನು SATS ನಲ್ಲಿ ಪರಿಶೀಲಿಸಬೇಕಾಗಿರುವುದು ಅವಶ್ಯಕವಾಗಿದೆ. ಆದ್ದರಿಂದ ಈ ಕೆಳಗಿನ ಮಾಹಿತಿಯನ್ನು SATS School Login ನಲ್ಲಿ ಪರಿಶೀಲಿಸಿಕೊಂಡು ಅವಶ್ಯ ಮಾಹಿತಿಯನ್ನು Update ಮಾಡಬೇಕು
1) DASHBOARD ಚೆಕ್ ಮಾಡಬೇಕು : ಶಾಲಾ ದಾಖಲಾತಿ ಪುಸ್ತಕಕ್ಕೂ ಹಾಗೂ SATS DashBoard ಗೂ ತಾಳೆ ಇರಬೇಕು.
2) 5, 8 & 9 ನೇ ತರಗತಿ ಮಕ್ಕಳ ಹೆಸರು ಪರಿಶೀಲಿಸಬೇಕು.ಹೆಸರು ತಪ್ಪಾಗಿದ್ದರೆ, Update ಮಾಡಬೇಕು.
3) 5, 8 & 9 ನೇ ತರಗತಿಗಳ Language Group ಪರಿಶೀಲಿಸಬೇಕು. ಒಂದು ವೇಳೆ Language Group ತಪ್ಪಾಗಿ Assign ಆಗಿದ್ದರೆ, ಸರಿಪಡಿಸಬೇಕು.
ಉದಾ : ಕನ್ನಡ ಮಾಧ್ಯಮ ಶಾಲೆಯಾಗಿದ್ದರೆ.
5 ನೇ ತರಗತಿಗೆ : KM_Kan_Eng
8 & 9 ನೇ ತರಗತಿಗೆ : KM_Kan_Eng_Hin ಈ ರೀತಿ ಇರಬೇಕು.
FLOWCHARTS
1) DASHBOARD ಚೆಕ್ ಮಾಡಲು
* Chrome open ಮಾಡಿರಿ
* SATS ಗೆ Login ಆಗಿರಿ
* DASHBOARD ಮೇಲೆ ಕ್ಲಿಕ್ ಮಾಡಿರಿ
ಆಗ ನಿಮ್ಮ ಶಾಲೆಯ ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಶಾಲೆಯಲ್ಲಿರುವ 5,8 & 9 ನೇ ತರಗತಿಗಳ ದಾಖಲಾತಿಯು ಶಾಲಾ ದಾಖಲಾತಿ ಪುಸ್ತಕಕ್ಕೆ ಸಮ ಇರಬೇಕು . ಒಂದು ವೇಳೆ ಸಮವಿಲ್ಲದಿದ್ದರೆ. TC IN ಅಥವಾ TC OUT ಇದರಲ್ಲಿ ಏನಾದರೂ ವ್ಯತ್ಯಾಸವಾಗಿರಬೇಕು ಅದನ್ನು ಪರಿಶೀಲಿಸಿ ಸರಿಪಡಿಸಬೇಕು.
2) ಮಕ್ಕಳ ಹೆಸರು ಚೆಕ್ ಮಾಡಲು
* Chrome open ಮಾಡಿರಿ
* SATS ಗೆ Login ಆಗಿರಿ
* DASHBOARD ಮೇಲೆ ಕ್ಲಿಕ್ ಮಾಡಿರಿ
ಇಲ್ಲಿ 5,8 & 9 ನೇ ತರಗತಿಗಳ ಮಕ್ಕಳ ಸಂಖ್ಯೆ ಮೇಲೆ ಕ್ಲಿಕ್ ಮಾಡಿದಾಗ ಆಯಾ ತರಗತಿಗಳ ಮಕ್ಕಳ LIST Open ಆಗುತ್ತದೆ. ಪ್ರತಿ ಮಗುವಿನ ಹೆಸರು ಪರಿಶೀಲಿಸಬೇಕು.
3) Language Group ಪರಿಶೀಲಿಸಬೇಕು. ( ಇದು ಬಹಳ ಮುಖ್ಯ)
* Chrome open ಮಾಡಿರಿ
* SATS ಗೆ Login ಆಗಿರಿ
* Student Management Class 1 to 10 ಮೇಲೆ ಕ್ಲಿಕ್ ಮಾಡಿರಿ
* Admission Details ಮೇಲೆ ಕ್ಲಿಕ್ ಮಾಡಿರಿ
* language Grou̧p Medium & Section Update ಮೇಲೆ ಕ್ಲಿಕ್ ಮಾಡಿರಿ
* Standard 5, 8 & 9 ಯಾವುದಾದರೂ ಒಂದು ಸೆಲೆಕ್ಟ ಮಾಡಿರಿ
* Update for ನಲ್ಲಿ Language Group
select ಮಾಡಿರಿ
* Medium select ಮಾಡಿರಿ
* Search ಮೇಲೆ ಕ್ಲಿಕ್ ಮಾಡಿರಿ
ಇಲ್ಲಿ ಆಯಾ ತರಗತಿಗಳ ಮಕ್ಕಳ List Open ಆಗುತ್ತದೆ. ಪ್ರತಿ ಮಗುವಿನ ಮುಂದೆ Language Group ಇರುತ್ತದೆ. ಇಲ್ಲಿ ನಿಮ್ಮ ಶಾಲೆಯ Language Group ಹಾಗೂ ಪ್ರತಿ ಮಗುವಿನ ಮುಂದಿರುವ Language Group Same ಇರಬೇಕು. ಒಂದು ವೇಳೆ ತಪ್ಪಾಗಿದ್ದರೆ, Update ಮಾಡಬೇಕು.
Last Update on : 16.01.2024
ಪರಿಷ್ಕೃತ ಸುತ್ತೋಲೆ
2023-24 ನೇ ಸಾಲಿನ 5,8 & 9 ನೇತರಗತಿ ಮೌಲ್ಯಾಂಕನ ಪರೀಕ್ಷೆಗೆ ಪಠ್ಯವಸ್ತು ಮತ್ತು ಅಂಕಗಳ ವಿವರ
ಕ್ರ.ಸಂ. | ವರ್ಗ | ಪರಿಷ್ಕೃತ ಅಂಶಗಳು |
---|---|---|
1 | 5 ನೇ ತರಗತಿ | 1) 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ನೀಡಿರುವಂತೆ ನವೆಂಬರ್ 2023 ರಿಂದ ಫೆಬ್ರವರಿ 2024 ರ ವರೆಗಿನ ಪಠ್ಯವಸ್ತುವನ್ನು ಪರಿಗಣಿಸುವುದು 2) SA-2 ಗೆ ಬದಲಾಗಿ ನಡೆಸುವ ನಡೆಸುವ ಮೌಲ್ಯಾಂಕನಕ್ಕೆ ಎಲ್ಲಾ ಭಾಷೆ ಮತ್ತು ಕೋರ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ & 40 ಅಂಕಗಳಿಗೆ ಲಿಖಿತ ಒಟ್ಟು 50 ಅಂಕಗಳಿಗೆ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು 3) ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು FA-1 FA-2 FA-3 FA-4 SA-1 SA-2 ಗಳ ಅಂಕಗಳನ್ನು 15+15+15+15+20+20=100 ರಂತೆ ಪರಿಗಣಿಸುವುದು 4) SATS ನಲ್ಲಿ ಇಂದೀಕರಿಸುವುದು. |
2 | 8 ನೇ ತರಗತಿ | 1) 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ನೀಡಿರುವಂತೆ ಜೂನ 2023 ರಿಂದ ಫೆಬ್ರವರಿ 2024 ರವರೆಗಿನ ವಾರ್ಷೀಕ ಪಠ್ಯವಸ್ತುವನ್ನು ಪರಗಣಿಸುವುದು. SA- 2 ಗೆ ಬದಲಾಗಿ ನಡೆಸುವ ಮೌಲ್ಯಾಂಕನಕ್ಕೆ ಎಲ್ಲಾ ಭಾಷೆ & ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 50 ಅಂಕಗಳಿಗೆ ಲಿಖಿತ ಒಟ್ಟು 60 ಅಂಕಗಳಿಗೆ ನಡೆಸಿ ನಂತರ 30 ಅಂಕಗಳಿಗೆ ಪರಿವರ್ತಿಸುವುದು. 2) ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು FA-1 FA-2 FA-3 FA-4 SA-1 SA-2 ಗಳ ಅಂಕಗಳನ್ನು 10+10+10+10+30+30=100 ರಂತೆ ಪರಿಗಣಿಸುವುದ 3) SATS ನಲ್ಲಿ ಇಂದೀಕರಿಸುವುದು. . ವಿಶೇಷ ಸೂಚನೆ : ಪ್ರಸ್ತುತ ಮೇಲ್ಕಂಡಂತೆ 8ನೇ ತರಗತಿ SA-2 ಮೌಲ್ಯಾಂಕನಕ್ಕೆ ಜೂನ 2023 ರಿಂದ ಫೆಬ್ರವರಿ 2024 ರವರೆಗಿನ ವಾರ್ಷೀಕ ಪಠ್ಯವಸ್ತುವನ್ನು ಪರಿಗಣಿಸುವುದರಿಂದಾಗಿ ವಿದ್ಯಾರ್ಥಿಗಳಿಗೆ ಮುಂಬರುವ 9 & 10 ನೇ ತರಗತಿ ಪರೀಕ್ಷೆಯನ್ನು ಬರೆಯಲು ರೂಢಿಯಾದಂತಾಗಿ ಉತ್ತಮ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ. |
3 | 9 ನೇ ತರಗತಿ | 1) 9ನೇ ತರಗತಿ SA-2 ಮೌಲ್ಯಾಂಕನಕ್ಕೆ ಆಯಾ ಭಾಷೆ ಮತ್ತು ಕೋರ ವಿಷಯಗಳಿಗೆ ನಿಗದಿಪಡಿಸಿದ ವಾರ್ಷೀಕ ಶೇ 100 ರಷ್ಟು ಪಠ್ಯವನ್ನು ಪರಿಗಣಿಸುವುದು. 2) ಆಂತರಿಕ ಮೌಲ್ಯಮಾಪನ : 4 FA ಗಳ 50+50+50+50 = 200 ಅಂಕಗಳಿಗೆ ನಿರ್ವಹಿಸಿ ನಂತರ ಪ್ರಥಮ ಭಾಷೆ 25 ಅಂಕಗಳಿಗೆ ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ತಲಾ 20 ಅಂಕಗಳಿಗೆ ಪರಿವರ್ತಿಸಿ ಅಂದರೆ 25+20+20+20+20+20 = 125 ಅಂಕಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸುವುದು. 3) SA-2 ಮೌಲ್ಯಾಂಕನ : ಪ್ರಥಮ ಭಾಷೆಗೆ 100 ಅಂಕಗಳು, ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ ಕೋರ್ ವಿಷಯಗಳಿಗೆ ತಲಾ 80 ಅಂಕಗಳಿಗೆ ಅಂದರೆ 100+80+80+80+80+80=500 ಅಂಕಗಳಿಗೆ ಮೌಲ್ಯಾಂಕನ / ಲಿಖಿತ ಪರೀಕ್ಷೆಯನ್ನು ನಡೆಸುವುದು. 4) ಅಂತಿಮವಾಗಿ ಫಲಿತಾಂಶ ನಿರ್ಧರಿಸಲು ಆಂತರಿಕ ಅಂಕಗಳು ಮತ್ತು SA-2 ಬದಲಾಗಿ ನಡೆಸುವ ಮೌಲ್ಯಾಂಕನ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದು. |