"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ಸಂಭ್ರಮ ಶನಿವಾರ


 ಸಂಭ್ರಮ ಶನಿವಾರ ಕಾರ್ಯಕ್ರಮ :

           ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಪಠ್ಯಕ್ರಮದಲ್ಲಿ ಮೌಲ್ಯ ಶಿಕ್ಷಣವನ್ನು ಅಳವಡಿಸಿದ್ದರು ತರಗತಿಯ ಕೊನೆಯಲ್ಲಿ ಅದನ್ನು ಸಮ್ಮೇಳತಗೊಳಿಸಿ ಮಕ್ಕಳಿಗೆ ಅಂತರ್ಗತ ಮಾಡುವುದು ಶಿಕ್ಷಕರಿಗೆ ಸವಾಲಾಗಿದೆ. ಸಂಭ್ರಮ ಶನಿವಾರ ಕಾರ್ಯಕ್ರಮ ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಪ್ರತಿ ತಿಂಗಳು ಮೂರನೇ ಶನಿವಾರವನ್ನು ಸಂಭ್ರಮ ಶನಿವಾರವೆಂದು ಬ್ಯಾಗರಹಿತ ದಿನವನ್ನಾಗಿ ಆಚರಿಸಲು ಇಲಾಖೆಯವರು ಸೂಚಿಸಿರುತ್ತಾರೆ. ಈ ಕಾರ್ಯಕ್ರಮವು ಮಗುವಿನಲ್ಲಿ ಸ್ವತಂತ್ರವಾಗಿ ಯೋಚಿಸುವ ಸೂಕ್ಷ್ಮ ಗ್ರಾಹಿ ಸಂತಸ ಮನಸ್ಸಿ ನ ವ್ಯಕ್ತಿತ್ವ ರೂಪಿಸಲು ಅವಶ್ಯಕವಾದ ಧನಾತ್ಮಕ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಜೊತೆಗೆ ಉತ್ತಮ ನಾಗರಿಕರನ್ನು ಬೆಳೆಸಲು ಪ್ರೋತ್ಸಾಹಿಸುತ್ತದೆ. ಕಾರಣ ಸದರಿ ಈ ಕಾರ್ಯಕ್ರಮವನ್ನು ಯಾವುದೇ ಪುಸ್ತಕ ನೋಟ್ ಪುಸ್ತಕ ಬ್ಯಾಗ ಇಲ್ಲದೆ ಮಕ್ಕಳು ಶಾಲೆಗೆ ಬಂದು ನಾಗರಿಕ ಪ್ರಜ್ಞೆ ಸಾಮಾಜಿಕ ಭಾವನಾತ್ಮಕ ಕೌಶಲಗಳು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮವು ಸಹಾಯಕವಾಗಿದೆ.

ಉದ್ದೇಶಗಳು :

1. ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ತರುವ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸುವುದು.

2. ಚಟುವಟಿಕೆ ಆಧಾರಿತ ಅನ್ವಯಿಕ ಕಲಿಕೆಯನ್ನು ಉಂಟುಮಾಡುವುದರ ಮೂಲಕ ಮಕ್ಕಳ ಭಾಗವಹಿಸುವಿಕೆಯನ್ನು ಪ್ರೇರೇಪಿಸುವುದು.

3. ಮಕ್ಕಳಿಗೆ ಶೈಕ್ಷಣಿಕ ಮತ್ತು ಭೌತಿಕ ಹೊರೆಯನ್ನು ಕಡಿಮೆ ಮಾಡುವುದು.

4. ಮೌಲ್ಯಾದ್ಹರಿತ ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಮಗ್ರ ವ್ಯಕ್ತಿತ್ವವನ್ನು ಬೆಳೆಸುವುದು.

ಆಯೋಜನೆ ಮತ್ತು ಅನುಷ್ಟಾನ :

ಸಂಭ್ರಮ ಶನಿವಾರವನ್ನು ಜೂನ್ 2024 ರಿಂದ ಮಾರ್ಚ್ 2025 ರವರೆಗಿನ ಪ್ರತಿ ಮೂರನೆಯ ಶನಿವಾರದಂದು ಆಯೋಜಿಸುವುದು ಪ್ರತಿ ವಿಷಯ ಮೂರು ಮುಖ್ಯ ಘಟಕಗಳನ್ನು ಹೊಂದಿದ್ದು ಮೂರು ಗಂಟೆಗಳ ಅವಧಿಗೆ 1-3, 4-5,  ಮತ್ತು 6-8 ತರಗತಿಯ ವಿದ್ಯಾರ್ಥಿಗಳ ಮಟ್ಟಕ್ಕೆ ಅನುಗುಣವಾಗಿ ನೀಡಿರುವ ಚಟುವಟಿಕೆಗಳನ್ನು ಅರಿವು, ಅನುಭವ ಮತ್ತು ಅವಲೋಕನಗಳೆಂಬ ಮೂರು ಹಂತಗಳಲ್ಲಿ ಆಯೋಜಿಸುವುದು.

ವೇಳಾಪಟ್ಟಿ ಜೂನ 2024 ರಿಂದ ಮಾರ್ಚ 2025 : 

1. ವಿಶೇಷ ಚೇತನವುಳ್ಳ ವ್ಯಕ್ತಿಗಳೊಂದಿಗೆ ಸಂವಹನ :  ಜೂನ 2024

CLICK HERE TO DOWNLOAD 👆

2. ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ :  ಜುಲೈ 2024







5. ಸಾರ್ವಜನಿಕ ನೈರ್ಮಲ್ಯ & ಘನತ್ಯಾಜ್ಯ ನಿರ್ವಹಣೆ  :  ಅಕ್ಟೋಬರ್ 2024












ಮುಖ್ಯ ಸೂಚನೆ :
ಮೇಲಿನ ಸಂಪೂರ್ಣ ಮಾಹಿತಿಯು 2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಇರುವಂತೆ ಇರುತ್ತದೆ.
ಮಾಹಿತಿಗಾಗಿ @ ಸಂತೋಷ ಶಿಕ್ಷಣ