ರಸಪ್ರಶ್ನೆ ಸ್ಪರ್ಧೆ 2024-25 ರ ವೇಳಾಪಟ್ಟಿ
*ಬ್ಲಾಕ್ ಮಟ್ಟದಲ್ಲಿ ಆನ್‌ಲೈನ್ನಲ್ಲಿ ಸ್ಪರ್ಧೆ ನಡೆಯುತ್ತದೆ.** ಬ್ಲಾಕ್ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಶಾಲಾವಧಿಯಲ್ಲಿ ನಡೆಸಬಹುದು.* *ತಾಂತ್ರಿಕ ಸಮಸ್ಯೆಗಳಿಂದ ವಿದ್ಯಾರ್ಥಿಯು ನಿಗದಿತ ದಿನದಂದು ರಸಪ್ರಶ್ನೆಯನ್ನು ಆಡಲು ವಿಫಲವಾದರೆ, ಇನ್ನೊಂದು ದಿನ ಆಡಲು ಅನುಮತಿಸಲಾಗುವುದಿಲ್ಲ. ತಾಂತ್ರಿಕ ಸಮಸ್ಯೆಗಳಿಗೆ ಇಲಾಖೆ ಹೊಣೆಯಾಗುವುದಿಲ್ಲ.*
*ಉತ್ತಮ ಇಂಟರ್ನೆಟ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಸಿ ವಿದ್ಯಾರ್ಥಿಗಳು ಬ್ಲಾಕ್ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಎಲ್ಲಿಮಮ ಆಡಬಹುದು. ಬಹು ಲಾಗಿನ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮುಖ್ಯ ಶಿಕ್ಷಕರು ಮಕ್ಕಳಿಗೆ ಅಗತ್ಯಸೌಲಭ್ಯ ಒದಗಿಸಬೇಕು*.
*.ರಸಪ್ರಶ್ನೆಯನ್ನು ಆಡುವಾಗ ವಿದ್ಯಾರ್ಥಿಯು ಪರದೆಯನ್ನು ಬಿಡಬಾರದು ಅಥವಾ ಕಿಟಕಿಯನ್ನು ಮುಚ್ಚಬಾರದು ಮತ್ತು ಯಾರ ಸಹಾಯವನ್ನೂ ಪಡೆಯಬಾರದು. ಯಾವುದೇ ನವೀಕರಣಗಳನ್ನು ಪರಿಶೀಲಿಸಲು ವಿದ್ಯಾರ್ಥಿಗಳು ನಿಯಮಿತವಾಗಿ ಈ ಪೋರ್ಟಲ್‌ಗೆ ಭೇಟಿ ನೀಡಬೇಕು.*
*ನಿಗದಿತ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳು ರಸಪ್ರಶ್ನೆಗೆ ಹಾಜರಾಗಬೇಕು. ಯಾವುದೇ ಕಾರಣದಿಂದ ಅವಳು/ಅವನು ಸ್ಪರ್ಧೆಯನ್ನು ತಪ್ಪಿಸಿಕೊಂಡರೆ ನಂತರ ಯಾವುದೇ ಪರ್ಯಾಯ ಆಯ್ಕೆ ಇರುವುದಿಲ್ಲ.*
*ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ವಿಜೇತರನ್ನು ಪರಿಶೀಲಿಸಬೇಕು..*
*ವಿಜೇತ ಬಹುಮಾನದ ಮೊತ್ತವನ್ನು ವರ್ಗಾಯಿಸಲು ಬ್ಲಾಕ್ಮಟ್ಟದಲ್ಲಿ ವಿಜೇತರು ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು ಮತ್ತು ಶಾಖೆ, IFSC, ಪಾಸ್ಬುಕ್ನ ನಕಲು ಇತ್ಯಾದಿಗಳಂತಹ ಬ್ಯಾಂಕಿನ ವಿವರಗಳನ್ನು ನವೀಕರಿಸಬೇಕು.*
*ಹೆಚ್ಚಿನ ಮಾಹಿತಿಗಾಗಿ ವಿದ್ಯವಾಹಿನಿ ಪೊರ್ಟಲ್ ನಲ್ಲಿ ಸೂಚನೆಗಳನ್ನು ಗಮನಿಸುವುದು**
ಮಾಹಿತಿಗಾಗಿ ಸಂತೋಷ ಶಿಕ್ಷಣ
1) ಉದ್ದೇಶಗಳು :-
* ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವುದು.
* ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ಹಾಗೂ ಸಾಮಾನ್ಯ ಜ್ಞಾನವನ್ನು ಬೆಳೆಸುವುದು.
2) ಸ್ಪರ್ಧೆಯ ಹಂತಗಳು :-
ಶಾಲಾ ಹಂತ : ಮುಖಾಮುಖಿ ಇರುತ್ತದೆ.
ತಾಲೂಕು ಹಂತ : On-Line ಇರುತ್ತದೆ.
ಜಿಲ್ಲಾ ಹಂತ : ಮುಖಾಮುಖಿ ಇರುತ್ತದೆ.
ವಿಭಾಗ ಹಂತ : ಮುಖಾಮುಖಿ ಇರುತ್ತದೆ.
ರಾಜ್ಯ ಹಂತ : ಬೆಂಗಳೂರಿನಲ್ಲಿ ಚಂದನ ವಾಹಿನಿಯಲ್ಲಿ ಮುಖಾಮುಖಿ ಇರುತ್ತದೆ.
1) ಜೂನಿಯರ್ ಹಂತ : 5 - 7 ನೇ ತರಗತಿ
2) ಸೀನಿಯರ್ ಹಂತ : 8 - 10 ನೇ ತರಗತಿ
3) ಸ್ಪರ್ಧೆಯ ನೋಂದಣಿ ಪ್ರಕ್ರಿಯೆ :-
* ಪ್ರತಿ ಶಾಲೆಯಲ್ಲಿ ಶಾಲಾ ಹಂತದ ರಸಪ್ರಶ್ನೆ ಸ್ಪರ್ಧೆಯನ್ನು ಮುಖಾಮುಖಿಯಾಗಿ ಆಯೋಜಿಸಬೇಕು.
ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾರತದ ಇತಿಹಾಸ ಪರಂಪರೆ ಮುಂತಾದ ವಿಷಯಗಳನ್ನು ಒಳಗೊಂಡಂತೆ 50 ಬಹುಆಯ್ಕೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಶಾಲಾ ಹಂತದಲ್ಲಿ ಆಯೋಜಿಸಬೇಕು.
* ಶಾಲಾ ಹಂತದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಆಯ್ಕೆ ಮಾಡುವುದು.
* ಶಾಲಾ ಹಂತದಲ್ಲಿ ವಿಜೇತರಾದವರನ್ನು ವಿದ್ಯಾ ವಾಹಿನಿ ಪೋರ್ಟಲ್ ನಲ್ಲಿ ನೊಂದಾಯಿಸಬೇಕು.
* ತಾಲೂಕು ಹಂತದ ರಸಪ್ರಶ್ನೆ ಸ್ಪರ್ಧೆ On-line mode ನಲ್ಲಿ ನಡೆಯುವುದು.
* ನಿಗದಿತ ದಿನಾಂಕದಂದು ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ಆನ್ಲೈನ್ ನಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು
* ತಾಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಹಂತದ ಮುಖಾಮುಖಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಯಾ ಡಯಟ್ ನಲ್ಲಿ ನಡೆಯುವುದು
* ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರನ್ನು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.
* ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯಾ ವಿಭಾಗ ಮಟ್ಟದ ಡಯಟ್ ನಲ್ಲಿ ನಡೆಯುವುದು. ಮುಖಾಮುಖಿ
* ಪ್ರತಿ ವಿಭಾಗದಿಂದ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿಜೇತರನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. (ಒಟ್ಟು 12 ವಿದ್ಯಾರ್ಥಿಗಳು)
* ರಾಜ್ಯಮಟ್ಟದಲ್ಲಿ ನಿಗದಿಪಡಿಸಿದ ದಿನಾಂಕದಂದು ಮುಖಾಮುಖಿಯಾಗಿ ಕ್ವಿಜ್ ಮಾಸ್ಟರ್ ಮೂಲಕ ನಡೆಸಲಾಗುತ್ತದೆ ಬೆಂಗಳೂರಿನ ದೂರದರ್ಶನ ಚಂದನ ವಾಹಿನಿಯಲ್ಲಿ ನಡೆಯುವುದು.
ON-LINE ನೋಂದಣಿ ಪ್ರಕ್ರಿಯೆ :-
* Vidya Vahini Portal open ಮಾಡಿರಿ.
* User Name ಹಾಕಿರಿ ( hm dise code ) ಉದಾ.hm29090000000
* Password ಹಾಕಿರಿ
* Modules ಗಳಲ್ಲಿ "ರಸಪ್ರಶ್ನೆ ಸ್ಪರ್ಧೆ Quiz Competition" ಮೇಲೆ ಕ್ಲಿಕ್ ಮಾಡಿರಿ
* ಸ್ಪರ್ಧೆಯ ನಿಯಮಗಳನ್ನು ಓದುವುದು.
* ಶಾಲಾ ಮಟ್ಟದ ವಿಜೇತರನ್ನು ನೋಂದಾಯಿಸಿ Tap ಮೇಲೆ ಕ್ಲಿಕ್ ಮಾಡಿದಾಗ Registration Form open ಆಗುತ್ತದೆ.
* ಇಲ್ಲಿ ಶಾಲೆಯಲ್ಲಿ ಭೌತಿಕವಾಗಿ ರಸಪ್ರಶ್ನೆಯನ್ನು ನಡೆಸಿ ಮೂವರು ವಿಜೇತರನ್ನು ನೋಂದಾಯಿಸಬೇಕು.
* 1) ಶಾಲೆಯ HM ಹೆಸರು ಬರೆಯಿರಿ
2) HM ಮೊಬೈಲ್ ಸಂಖ್ಯೆ ಬರೆಯಿರಿ.
3) ಭಾಗವಹಿಸಿದವರ ಸಂಖ್ಯೆ ( ಕಿರಿಯ ವಿಭಾಗ)
4) ಭಾಗವಹಿಸಿದವರ ಸಂಖ್ಯೆ ( ಹಿರಿಯ ವಿಭಾಗ)
Entry ಮಾಡಿ "ಸಲ್ಲಿಸು / Submit" ಮೇಲೆ ಕ್ಲಿಕ್ ಮಾಡಿರಿ
* "ವಿಜೇತರನ್ನು ಸೇರಿಸಿರಿ / Add winners"
ಮೇಲೆ ಕ್ಲಿಕ್ ಮಾಡಿರಿ.
ಇಲ್ಲಿ ನಿಮ್ಮ ಶಾಲೆಯಲ್ಲಿ ವಿಜೇತರಾದ ಮೂವರು ವಿದ್ಯಾರ್ಥಿಗಳನ್ನು ನೋಂದಾಯಿಸಿರಿ. ( ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಮಕ್ಕಳನ್ನು ಮಾತ್ರ ನೋಂದಾಯಿಸಬೇಕು)
ನೋಂದಾಯಿಸಲು ಕೆಳಗಿನ ಮಾಹಿತಿ ಅವಶ್ಯವಾಗಿ ಬೇಕು.
1. ಮಗುವಿನ SATS ನಂಬರ್
2. student mobile number
3. Password Set ಮಾಡುವುದು.
4. Quiz Language Select ಮಾಡುವುದು.
5. Rank No. Select ಮಾಡುವುದು. ( 1, 2 Or 3)
6. Bank Name
7. Bank account No.
8. Bank Branch
9. Bank IFSC Code
ಮೇಲಿನ ಅಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ SUBMIT ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೊವನ್ನು ವೀಕ್ಷಿಸಿರಿ. ಇದರಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಮುಖ್ಯ ಸೂಚನೆ :- ಈ ವೀಡಿಯೊ ಕಳೆದ ಸಾಲಿನ ವೀಡಿಯೊ ಆಗಿದೆ ಆದರೂ ಕೂಡ ನೋಂದಣಿ ಪ್ರಕ್ರಿಯೆ ಅದೇ ರೀತಿ ಇರುತ್ತದೆ.
