ಆತ್ಮೀಯ ವೃತ್ತಿ ಬಾಂಧವರೇ,
ಇದೆ ದಿನಾಂಕ August 23, 2024 ರಂದು ಈ ವರ್ಷದ ವಿಶೇಷ ದಿನಾಚರಣೆಯ "ರಾಷ್ಟ್ರೀಯ ಬಾಹ್ಯಾಕಾಶ ದಿನ" ಆಚರಿಸಲಾಗುತ್ತಿದೆ. ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ 23 Aug, 2023 ರಂದು ವಿಕ್ರಮ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಬಳಿ ಮೃದುವಾಗಿ ಸ್ಪರ್ಶಿಸಿದ ದಿನವಾಗಿದೆ. ಇದನ್ನು 4 ನೇ ದೇಶವಾಗಿ ಭಾರತ ಮೈಲುಗಲ್ಲು ಸಾಧಿಸಿದೆ. ಹಾಗೂ ದಕ್ಷಿಣ ಧ್ರುವದ ಬಳಿ ಲ್ಯಾಂಡರ್ ಅನ್ನು ಇಳಿಸಿದ ಮೊದಲ ದೇಶವಾಗಿ ಸಾಧಿಸಿರುವುದು ಹೆಮ್ಮೆಯ ಸಂಗತಿಯೇ ಸರಿ. ಈ ಅವಿಸ್ಮರಣೀಯ ದಿನದ ನೆನಪಿಗಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು Aug 23 ಅನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಘೋಷಿಸಿದರು.
ಈ ಅವಿಸ್ಮರಣೀಯ ಸಾಧನೆಯ ಮಾಹಿತಿಯು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಕ್ಷಿಬಹುದಾಗಿದೆ. ಹಾಗೂ ಮಕ್ಕಳಿಗಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮವನ್ನು ಕೂಡ ಸಂತೋಷ ಶಿಕ್ಷಣ Blog ನಲ್ಲಿ ರಚಿಸಲಾಗಿತ್ತು. ಈ on-line ರಸಪ್ರಶ್ನೆಯಲ್ಲಿ ರಾಜ್ಯಾದ್ಯಂತ ಸುಮಾರು 50,000 ಮಕ್ಕಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಾಗೂ ಪ್ರೋತ್ಸಾಹಿಸಿದ ಎಲ್ಲಾ ಶಿಕ್ಷಕರಿಗೂ ಮತ್ತು ಮಾರ್ಗದರ್ಶನ ಮಾಡಿದ ಎಲ್ಲಾ ಹಂತದ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.