"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ಪರೀಕ್ಷಾ ಸಂಭ್ರಮ 2024

 ಪರೀಕ್ಷಾ ಸಂಭ್ರಮ - 2024


             
ಉದ್ದೇಶ : " ಶಾಲಾ ನಾಯಕರು ಸಹ ಶಿಕ್ಷಕರೊಂದಿಗೆ ಸೇರಿಕೊಂಡು ವಿದ್ಯಾರ್ಥಿಗಳು ಭಯ ಮುಕ್ತವಾಗಿ ಮತ್ತು ವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಜ್ಜಾಗುವಂತೆ ಸಾಪ್ತಾಹಿಕ ಪರಸ್ಪರ ಹಂಚಿಕೆ ಶಿಬಿರಗಳನ್ನು ಮಾಡುತ್ತಾರೆ" 
                  ಅಂದರೆ ನಾವು ಶಾಲೆಯಲ್ಲಿ ಪರೀಕ್ಷಾ ಸಂಭ್ರಮ 2024 ಕಾರ್ಯಕ್ರಮವನ್ನು ಆಯೋಜಿಸಬೇಕಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರತಿ ವಿದ್ಯಾರ್ಥಿಯು ಪರೀಕ್ಷೆಯನ್ನು ಭಯ ಮುಕ್ತವಾಗಿ ಸಂಭ್ರಮದಿಂದ ಎದುರಿಸಬೇಕು. ಇದಕ್ಕಾಗಿ ನಾವು ನಮ್ಮ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಪರೀಕ್ಷಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಪರಸ್ಪರ ಹಂಚಿಕೆ ಶಿಬಿರಗಳನ್ನು ಆಯೋಜಿಸಬೇಕು. ಮತ್ತು ಮಕ್ಕಳೊಂದಿಗೆ ಸಮಾಲೋಚನೆ ಮಾಡಬೇಕು. ಮಕ್ಕಳಲ್ಲಿರುವ ಪರೀಕ್ಷಾ ಭಯವನ್ನು ದೂರ ಮಾಡಬೇಕು. ಪರೀಕ್ಷೆಯನ್ನು ಸಂಭ್ರಮದಿಂದ ಆಚರಿಸುವಂತೆ ಪ್ರೆರೇಪಿಸಬೇಕು. ವಿದ್ಯಾರ್ಥಿಯು ಪರೀಕ್ಷಾ ಕೊಠಡಿಯಲ್ಲಿ ಕಾಲಿಟ್ಟಾಗ ಭಯ ಮುಕ್ತನಾಗಿರಬೇಕು ಹಬ್ಬದ ರೀತಿಯಲ್ಲಿ ಅನುಭವಿಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.
             ಇದಕ್ಕಾಗಿ ನಾವು ಪರೀಕ್ಷಾ ಸಂಭ್ರಮ 2024 ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಬೇಕು ಇದರ ಭಾಗವಾಗಿ ನಾವು 4 ಚಟುವಟಿಕೆಗಳನ್ನು ನಿರ್ವಹಿಸಬೇಕು. 
1) ಪರೀಕ್ಷಾ ಸಂಭ್ರಮ ಆಯೋಜನೆ :
                  ಸಹ ಶಿಕ್ಷಕರ ಸಭೆಯನ್ನುಕರೆದು ಪರೀಕ್ಷಾ ಸಂಭ್ರಮದ ಉದ್ದೇಶ & ಚಟುವಟಿಕೆಗಳ ಮಾಹಿತಿಯನ್ನು ನೀಡುವುದು. 3 ವಾರಗಳ ಕಾಲ ಶಾಲಾ ವೇಳಾಪಟ್ಟಿಯಲ್ಲಿ ಪರೀಕ್ಷಾ ಸಂಭ್ರಮ ಕಾರ್ಯಕ್ರಮಕ್ಕೆ ಅವಕಾಶವನ್ನು ಕಲ್ಪಿಸುವುದು.ಹಾಗೂ ಪರಸ್ಪರ ಹಂಚಿಕೆ ಶಿಬಿರ ಮತ್ತು ಪರೀಕ್ಷಾ ಸಂಭ್ರಮ ಗೋಡೆ ಫಲಕ ಕುರಿತು ಚರ್ಚಿಸುವುದು.

2) ಪರಸ್ಪರ ಹಂಚಿಕೆಗಳ ಶಿಬಿರಗಳ ಆಯೋಜನೆ :
                 45 ನಿಮಿಷಗಳ ಅವಧಿಯ ಶಿಬಿರಗಳನ್ನು ಆಯೋಜಿಸಬೇಕು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಬೇಕು ಹಾಗೂ ಮಕ್ಕಳಲ್ಲಿರುವ ಪರೀಕ್ಷಾ ಭಯವನ್ನು ದೂರ ಮಾಡುವುದು.

3) ಪರಸ್ಪರ ಹಂಚಿಕೆ ಶಿಬಿರಗಳ ವೀಕ್ಷಣೆ :
                ಇಲ್ಲಿ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಆಯೋಜಿಸಿರುವ ಶಿಬಿರಗಳನ್ನು ವೀಕ್ಷಿಸುವುದು ಮತ್ತು ಭಾಗವಹಿಸುವುದು ಹಾಗೂ ಮಕ್ಕಳೊಂದಿಗೆ ಸಮಾಲೋಚಿಸಿ ಸೂಕ್ತ ಮಾರ್ಗದರ್ಶನ ಮಾಡುವುದು.

4) "ಪರೀಕ್ಷಾ ಸಂಭ್ರಮ" ಗೋಡೆ ಫಲಕ :
                ಶಾಲೆಯಲ್ಲಿ ಸೂಕ್ತ ಜಾಗೆಯಲ್ಲಿ ಅಂದರೆ ವಿದ್ಯಾರ್ಥಿಗಳು ಪ್ರತಿದಿನ ವೀಕ್ಷಿಸಬಹುದಾದ ಜಾಗೆಯಲ್ಲಿ "ಪರೀಕ್ಷಾ ಸಂಭ್ರಮ" ಗೋಡೆ ಫಲಕಗಳನ್ನು ತೂಗು ಹಾಕಬೇಕು. ಮತ್ತು ಈ ಫಲಕಗಳು ಮಕ್ಕಳಲ್ಲಿರುವ ಪರೀಕ್ಷಾ ಭಯವನ್ನು ದೂರು ಮಾಡುವಂತಿರಬೇಕು. ಪರೀಕ್ಷೆಗೆ ಪ್ರೇರೇಪಿಸುವಂತಿರಬೇಕು.
                            ಶಾಲೆಯಲ್ಲಿ ಆಯೋಜಿಸಿರುವ ಈ ಪರೀಕ್ಷಾ ಸಂಭ್ರಮದ ಚಟುವಟಿಕೆಗಳ ಪೋಟೊ, ವೀಡಿಯೋ & PDF ಗಳನ್ನು DIKSHA Portal ನಲ್ಲಿ ಅಪ್‌ ಲೋಡ್‌ ಮಾಡಬೇಕು. ಅಪ್ಲೋಡ್‌ ಮಾಡುವ ಅವಕಾಶವನ್ನು ಮುಖ್ಯ ಶಿಕ್ಷಕರ ದೀಕ್ಷಾ LOGIN ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಪ್ರತಿ ಶಿಕ್ಷಕರು ಪ್ರತಿ ತರಗತಿಯಲ್ಲಿ ಆಯೋಜಿಸಿರುವ ಪರಸ್ಪರ ಹಂಚಿಕೆ ಶಿಬಿರಗಳ ಹಾಗೂ ಗೋಡೆ ಫಲಕಗಳ ಪೋಟೊ ವೀಡಿಯೊ ಗಳನ್ನು ದಾಖಲೀಕರಣ ಮಾಡಿಕೊಂಡು ತಮ್ಮ DIKSHA Portal Login ನಲ್ಲಿ ಇದಕ್ಕೆ ಸಂಬಂಧಿಸಿದ 7 ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ Upload ಮಾಡಬೇಕು.

                            ಮುಖ್ಯ ಶಿಕ್ಷಕರು ತಮ್ಮ ದೀಕ್ಷಾ ಲಾಗಿನ್‌ ನಲ್ಲಿ ಅಪ್‌ ಲೋಡ್‌ ಮಾಡಬೇಕು. ಮುಖ್ಯ ಶಿಕ್ಷಕರು ಹೊಸದಾಗಿ ಲಾಗಿನ್‌ ಆಗುತ್ತಿದ್ದರೆ. 
* Playstore ನಲ್ಲಿ DIKSHA App ಅನ್ನು Install ಮಾಡಿರಿ ಮತ್ತು ಓಪನ್‌ ಮಾಡಿರಿ 
* ನಂತರ ಭಾಷೆಯನ್ನು Select ಮಾಡಿರಿ 
* ನಂತರ ಶಾಲಾ ಮುಖ್ಯಸ್ಥ Select ಮಾಡಿರಿ
* ನಂತರ Welcom to DIKSHA Login page ಓಪನ್‌ ಆಗುತ್ತದೆ.
* ಮುಖ್ಯ ಶಿಕ್ಷಕರು ತಮ್ಮ Mobile ನಂಬರ್‌ ಹಾಗೂ Password ಹಾಕಿ Login ಆಗಿರಿ.
* Password ಮರೆತಿದ್ದರೆ. Forget Password ಮೇಲೆ ಕ್ಲಿಕ್‌ ಮಾಡಿ
* ಮೊಬೈಲ್‌ ನಂಬರ್‌ ಮತ್ತು ಹೆಸರು ಹಾಕಿ Next ಮೇಲೆ ಕ್ಲಿಕ್‌ ಮಾಡಿರಿ.
* mobile ಗೆ ಬಂದ OTP ಹಾಕಿರಿ ಹೊಸ Password Set ಮಾಡಿರಿ
* ನಂತರ ಲಾಗಿನ್‌ ಪೇಜ್‌ ಗೆ ಬಂದು ಲಾಗಿನ್‌ ಆಗಿರಿ
                            ನಂತರ ನಮ್ಮ ಲಾಗಿನ್‌ ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ ನಾವು ಕೆಲವು  ಅಪ್‌ ಡೇಟ್‌ ಗಳನ್ನು ಮಾಡಬೇಕು 
* Profile logo ಮೇಲೆ ಕ್ಲಿಕ್‌ ಮಾಡಿ
* "ಪರಿಷ್ಕರಿಸಿ" ಮೇಲೆ ಕ್ಲಿಕ್‌ ಮಾಡಿ
* Role ಮೇಲೆ ಕ್ಲಿಕ್‌ ಮಾಡಿ "ಶಾಲಾ ಮುಖ್ಯಸ್ಥರು ಅಥವಾ ಅಧಿಕಾರಿಗಳು" Select ಮಾಡಿರಿ
* Subrole ನಲ್ಲಿ HM ಎಂದು Select ಮಾಡಿರಿ.
* ಇನ್ನುಳಿದ ಮಾಹಿತಿಯನ್ನು ಅಪ್‌ ಡೇಟ್‌ ಮಾಡಿರಿ
* ಸಲ್ಲಿಸಿ ಮೇಲೆ ಕ್ಲಿಕ್‌ ಮಾಡಿರಿ
               ನಂತರ Main Page Open ಆಗುತ್ತದೆ.
                                            Main Page ನಲ್ಲಿ ವೀಕ್ಷಣೆ ಮೇಲೆ ಕ್ಲಿಕ್‌ ಮಾಡಿ ಪರೀಕ್ಷಾ ಸಂಭ್ರಮದ ಉದ್ದೇಶವನ್ನು ಓದಿರಿ.
ನಂತರ Project ಮೇಲೆ ಕ್ಲಿಕ್‌ ಮಾಡಿ 7 ಚಟುವಟಿಕೆಗಳನ್ನು ನಿರ್ವಹಿಸಿ "ಪರೀಕ್ಷಾ ಸಂಭ್ರಮ" ಕಾರ್ಯಕ್ರಮದ ಪೋಟೊ, ವೀಡಿಯೊಗಳನ್ನು Upload ಮಾಡಬೇಕು.
DIKSHA PORTAL ನಲ್ಲಿ ನಿರ್ವಹಿಸಬೇಕಾದ 7 ಚಟುವಟಿಕೆಗಳು :-
ಮೊದಲು Start Improvement ಮೇಲೆ ಕ್ಲಿಕ್‌ ಮಾಡಿ ಮುಂದುವರಿಯಿರಿ
1) ಪರೀಕ್ಷಾ ಸಂಭ್ರಮವನ್ನು ಹೇಗೆ ನಡೆಸಬಹುದೆಂದು ತಿಳಿಯಲು View Resource (ಸಂಪನ್ಮೂಲಗಳನ್ನು ನೋಡಿ) ಮೇಲೆ ಕ್ಲಿಕ್‌ ಮಾಡಿ
ಮೊದಲು ಸಂಪನ್ಮೂಲಗಳನ್ನು ನೋಡಿ ಮೇಲೆ ಕ್ಲಿಕ್‌ ಮಾಡಿ ಮಾಹಿತಿಯನ್ನು ಓದಿರಿ.
 ನಂತರ MANDATORY ಮೇಲೆ ಕ್ಲಿಕ್‌ ಮಾಡಿರಿ ಹಾಗೂ 
            * ಕ್ಯಾಲೆಂಡರ್‌ logo ಮೇಲೆ ಕ್ಲಿಕ್‌ ಮಾಡಿ ಈ ಚಟುವಟಿಕೆ ನಿರ್ವಹಿಸಿದ ದಿನಾಂಕವನ್ನು select ಮಾಡಿರಿ.
            * ಸ್ಥತಿಗತಿ ಮೇಲೆ ಕ್ಲಿಕ್‌ ಮಾಡಿ Completed Select ಮಾಡಿರಿ.
            * ಸಬ್‌ ಟಾಸ್ಕ್‌ ಮೇಲೆ ಕ್ಲಿಕ್‌ ಮಾಡಿರಿ ಹೆಸರು ಬರೆಯಿರಿ.
            * Add files ಮೇಲೆ ಕ್ಲಿಕ್‌ ಮಾಡಿ ಸಂಬಂಧಿಸಿದ ಪೋಟೊ, ವೀಡಿಯೊಗಳನ್ನು Upload ಮಾಡಿರಿ.
2) ಎಲ್ಲಾ ತರಗತಿಯಲ್ಲಿ ಪರಸ್ಪರ ಹಂಚಿಕೆ ಶಿಬಿರಗಳನ್ನು ಆಯೋಜಿಸಲು ಸಹ ಶಿಕ್ಷಕರೊಂದಿಗೆ ಸಭೆ ನಡೆಸಿರಿ.
       (ಇದಕ್ಕೆ ಸಂಬಂಧಿಸಿದ ಪೋಟೊ ಹಾಗೂ ವೀಡಿಯೊ ದಾಖಲೀಕರಣ ಮಾಡಿರಿ.)
       ( ಇದನ್ನು 1 ನೇ ಚಟುವಟಿಕೆ ರೀತಿಯಲ್ಲಿ Update ಮಾಡಿರಿ )
3) ಸಾಪ್ತಾಹಿಕವಾಗಿ ಪರಸ್ಪರ ಹಂಚಿಕೆ ಶಿಬಿರಗಳನ್ನು ಸಂಘಟಿಸುವಲ್ಲಿ ಸಹ ಶಿಕ್ಷಕರನ್ನು ಬೆಂಬಲಿಸಿರಿ.
        (ಇದಕ್ಕೆ ಸಂಬಂಧಿಸಿದ ಪೋಟೊ ಹಾಗೂ ವೀಡಿಯೊ ದಾಖಲೀಕರಣ ಮಾಡಿರಿ.)
        ( ಇದನ್ನು 1 ನೇ ಚಟುವಟಿಕೆ ರೀತಿಯಲ್ಲಿ Update ಮಾಡಿರಿ )
4) ಪರಸ್ಪರ ಹಂಚಿಕೆ ಶಿಬಿರಗಳನ್ನು ಗಮನಿಸಿ ಮತ್ತು ವಿದ್ಯಾರ್ಥಿಗಳೊಂದಿಗೆ ತಾವೂ ತೊಡಗಿಸಿಕೊಳ್ಳಿರಿ
        (ಇದಕ್ಕೆ ಸಂಬಂಧಿಸಿದ ಪೋಟೊ ಹಾಗೂ ವೀಡಿಯೊ ದಾಖಲೀಕರಣ ಮಾಡಿರಿ.)
        ( ಇದನ್ನು 1 ನೇ ಚಟುವಟಿಕೆ ರೀತಿಯಲ್ಲಿ Update ಮಾಡಿರಿ )
5) ತರಗತಿಯಲ್ಲಿ ನಡೆಸಿದ ಪರಸ್ಪರ ಹಂಚಿಕೆ ಶಿಬಿರದ ಕುರಿತು ಶಿಕ್ಷಕರೊಂದಿಗೆ ಅವಲೋಕಿಸಿರಿ.
        (ಇದಕ್ಕೆ ಸಂಬಂಧಿಸಿದ ಪೋಟೊ ಹಾಗೂ ವೀಡಿಯೊ ದಾಖಲೀಕರಣ ಮಾಡಿರಿ.)
        ( ಇದನ್ನು 1 ನೇ ಚಟುವಟಿಕೆ ರೀತಿಯಲ್ಲಿ Update ಮಾಡಿರಿ )
6) ವಿದ್ಯಾರ್ಥಿಗಳನ್ನು ಪ್ರೇರೆಪಿಸಲು ಶಾಲೆಯಲ್ಲಿ ಪರೀಕ್ಷಾ ಸಂಭ್ರಮ ಗೋಡೆ ಫಲಕಗಳನ್ನು ರಚಿಸಿರಿ.
        (ಇದಕ್ಕೆ ಸಂಬಂಧಿಸಿದ ಪೋಟೊ ಹಾಗೂ ವೀಡಿಯೊ ದಾಖಲೀಕರಣ ಮಾಡಿರಿ.)
        ( ಇದನ್ನು 1 ನೇ ಚಟುವಟಿಕೆ ರೀತಿಯಲ್ಲಿ Update ಮಾಡಿರಿ )
7) ಪರಸ್ಪರ ಹಂಚಿಕೆ ಶಿಬಿರ ಮತ್ತು ಪರೀಕ್ಷಾ ಸಂಭ್ರಮ ಗೋಡೆ ಫಲಕಗಳ ಚಿತ್ರಗಳು ಹಾಗೂ ವೀಡಿಯೊಗಳನ್ನು ಅಪ್‌ ಲೋಡ್‌ ಮಾಡಿರಿ
          ಇಲ್ಲಿ ಮೇಲಿನ 6 ಚಟುವಟಿಕೆಗಳನ್ನು ನಿರ್ವಹಿಸಿದ ಸಂದರ್ಭದಲ್ಲಿ ದಾಖಲೀಕರಿಸಿಕೊಂಡ Photo & Video ಗಳನ್ನು Upload ಮಾಡಬೇಕು.
         7 ಚಟುವಟಿಕೆಗಳನ್ನು ಪೂರ್ತಿಯಾಗಿ ನಿರ್ವಹಿಸಿದ ಮೇಲೆ Your Progress ನಲ್ಲಿ 7/7 ಅಂತಾ ಬರುತ್ತದೆ.
           ಈ ರೀತಿಯಾಗಿ 7 ಚಟುವಟಿಕೆಗಳನ್ನು ನಿರ್ವಹಿಸಿದ ಮೇಲೆ Sync ಮೇಲೆ ಕ್ಲಿಕ್‌ ಮಾಡಿರಿ. ನಂತರ Submit Improvement ಮೇಲೆ ಕ್ಲಿಕ್‌ ಮಾಡಿ Finel Submit ಮಾಡಬೇಕು.