2023-24 ನೇ ಸಾಲಿಗೆ ಸಂಬಂಧಿಸಿದಂತೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ( SDMC ) ಎರಡು ಸಭೆಗಳ ಮಾಹಿತಿ
2023-24 ನೇ ಸಾಲಿನಲ್ಲಿನ AWP & B ಅನುಮೋದನೆಯ ಪ್ರಕಾರ 2023- 24 ನೇ ಶೈಕ್ಷಣಿಕ ವರ್ಷದಲ್ಲಿ ಫೆಬ್ರವರಿ ಮತ್ತು ಮಾರ್ಚ 2024 ತಿಂಗಳಿನಲ್ಲಿ ಎರಡು SDMC ಸಭೆಗಳನ್ನು ಆಯೋಜಿಸಬೇಕು. ಪ್ರತಿ SDMC ಸಭೆಗೆ 250/- ರೂಗಳ ಅನುದಾನದಂತೆ ಒಟ್ಟು 500/- ರೂಗಳು HM & SDMC ಖಾತೆಗೆ ಜಮೆಯಾಗಲಿದೆ. ಹಾಗೂ ಈ ಎರಡು ಸಭೆಗಳನ್ನು ಇದೇ ವರ್ಷ ಫೆಬ್ರವರಿಯಲ್ಲಿ ಒಂದು ಹಾಗೂ ಮಾರ್ಚನಲ್ಲಿ ಒಂದು ಒಟ್ಟು ಎರಡು ಸಭೆಗಳನ್ನು ನಡೆಸಬೇಕು. ಮತ್ತು ಈ SDMC ಸಭೆಗಳಲ್ಲಿ ಸದಸ್ಯರಿಗೆ ಬುನಾದಿ, ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನ ಮತ್ತು SDP ಹಾಗೂ SAP ಗಳ ಬಗ್ಗೆ ಚರ್ಚಿಸಬೇಕು.
2 SDMC ಸಭೆಗಳ ವೇಳಾಪಟ್ಟಿ
1 ನೇ SDMC ಸಭೆ :
ದಿನಾಂಕ : 26.02.2024 ರಿಂದ 29.02.2024
ಸಮಯ : ಬೆಳಗ್ಗೆ 10.00 ರಿಂದ ಸಂಜೆ 5.00 ರ ವರೆಗೆ
ಚರ್ಚಿಸಬೇಕಾದ ವಿಷಯಗಳು :
1) ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಚರ್ಚಿಸುವುದು.
2) ಪೋಷಕರ ಮನೆಗಳಲ್ಲಿ ಮಕ್ಕಳ ಕಲಿಕಾ ಪರಿಸರ ನಿರ್ಮಾಣ ಮಾಡುವ ಕುರಿತು.
3) ವಿದ್ಯಾಂಜಲಿ 2.0 ಕಾರ್ಯಕ್ರಮದಡಿಯಲ್ಲಿ ದಾನಿಗಳನ್ನು ಗುರುತಿಸಿ Vidyanjali Portal ನಲ್ಲಿ ನೋಂದಣಿ ಮಾಡುವ ಕುರಿತು ಚರ್ಚಿಸುವುದು.
ಮೊದಲನೆಯ SDMC ಸಭೆಯಲ್ಲಿ ಒಂದು ಅವಧಿಯನ್ನು ವಿದ್ಯಾಂಜಲಿ 2.0 ಕುರಿತು ಮಾಹಿತಿಯನ್ನು ನೀಡಬೇಕು. ಅಂದರೆ ಶಾಲಾ ಶಿಕ್ಷಣದಲ್ಲಿ ಸಮುದಾಯದ ಸದಸ್ಯರು ನಿಂರತರ ಸಂಪರ್ಕದಲ್ಲಿದ್ದು. ಶಾಲೆಯ ಭೌತಿಕ ಸೌಲಭ್ಯಗಳನ್ನು ಸುಧಾರಿಸಲು ಪ್ರಯತ್ನಿಸಬೇಕು. ಶಾಲೆಯಲ್ಲಿ ಸಮುದಾಯದ ಪರಿಣಾಮಕಾರಿ ಬಾಗವಹಿಸುವಿಕೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹತ್ವದ ಪಾತ್ರವನ್ನುವಹಿಸಬೇಕು. ಇದಕ್ಕಾಗಿ ಘನ ಸರಕಾರ ವಿದ್ಯಾಂಜಲಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ನಲ್ಲಿ ಶಾಲೆಯೂ ಕೂಡ ರಿಜಿಸ್ಟರ್ ಮಾಡಿಕೊಂಡು ಶಾಲೆಗೆ ಬೇಕಾದ ಅಗತ್ಯಗಳನ್ನು ನಮೂದಿಸುವುದು.
ವಿದ್ಯಾಂಜಲಿ 2.0 ಪೋರ್ಟಲ್ ನಲ್ಲಿ School Registration And Login ಸಂಬಂಧಿಸಿದ ಮಾಹಿತಿಗಾಗಿ ವಿಡಿಯೋ ವಿಕ್ಷೀಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.
ಅದೇ ರೀತಿ ಸಮುದಾಯವನ್ನು ಶಾಲೆಗೆ ಬೇಕಾದ ಅಗತ್ಯಗಳನ್ನು ನೀಡಲು ಪ್ರೋತ್ಸಾಹಿಸಬೇಕು. ಮತ್ತು ಅಂತಹ ದಾನಿಗಳು ಅಥವಾ NGO ಗಳು ಬಂದರೆ ಅವರನ್ನು ವಿದ್ಯಾಂಜಲಿ 2.0 ದಲ್ಲಿ Volunteer Registration ನಲ್ಲಿ ನೋಂದಾಯಿಸಲು ಪ್ರೋತ್ಸಾಹಿಸುವುದು.
Volunteer Registration Flowchart Click Here to Download
ವಿದ್ಯಾಂಜಲಿ ಎಂದರೇನು?
ಶಿಕ್ಷಣ ಸಚಿವಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಾರತ ಸರ್ಕಾರವು ಶಾಲಾ ಶಿಕ್ಷಣದಲ್ಲಿ ಸಮುದಾಯ ಸ್ವಯಂಸೇವಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕೊಡುಗೆ ಸೇವೆಗಳನ್ನು ಗುರುತಿಸಿ ಶಾಲೆಗಳಿಗೆ ಸದುಪಯೋಗವಾಗುವಂತೆ ಮಾಡಲು ಇರುವ ವೇದಿಕೆ ವಿದ್ಯಾಂಜಲಿ 2.0
ಶಾಲಾ ಅಭಿವೃದ್ಧಿಗೆ ನೋಂದಾಯಿಸಿಕೊಳ್ಳಬಹುದಾದ ಸ್ವಯಂಸೇವಕರು :
ಭಾರತದ ಪ್ರಜೆ ಅನಿವಾಸಿ ಭಾರತೀಯ ಅಥವಾ ಭಾರತೀಯ ಮೂಲದ ವ್ಯಕ್ತಿ ಸೇವೆಯಲ್ಲಿ ಇರುವ ನಿವೃತ್ತ ಶಿಕ್ಷಕರು ವಿಜ್ಞಾನಿಗಳು ಸಶಸ್ತ್ರ ಉದ್ಯೋಗಿಗಳು ಶಿಕ್ಷಣ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಗೃಹಿಣಿಯರು ಅಥವಾ ಭಾರತದಲ್ಲಿ ನೋಂದಾಯಿಸಲಾದ ಸ್ವಯಂ ಸೇವಾ ಸಂಸ್ಥೆಗಳು CSR ಗುಂಪುಗಳು / NGO ಗಳು ವಿದ್ಯಾಂಜಲಿ 2.0 ದಲ್ಲಿ ನೋಂದಾಯಿಸಿಕೊಳ್ಳಬಹುದು.
ವಿದ್ಯಾಂಜಲಿ 2.0 ಲಿಂಕ್ : https://vidyanjali.education.gov.in
Found Relesead vidyanjali order Download
2 ನೇ SDMC ಸಭೆ :
ದಿನಾಂಕ : 11.03.2024 ರಿಂದ 15.03.2024 ರ ವರೆಗೆ
ಸಮಯ : ಬೆಳಗ್ಗೆ 10.00 ರಿಂದ ಸಂಜೆ 5.00 ರ ವರೆಗೆ
ಚರ್ಚಿಸಬೇಕಾದ ವಿಷಯಗಳು :
1) ಮೊದಲನೇ ಸಭೆಯ ನಿರ್ಣಯಗಳ ಮಂಡನೆ & ಅನುಮೋದನೆ.
2) ಮೂಲಭೂತ ಸೌಕರ್ಯಗಳು ಹಾಗೂ ಶಾಲಾ ಸುರಕ್ಷತೆ ಕುರಿತು ಚರ್ಚೆ.
3) SA - 2 ಪರೀಕ್ಷೆ ಕುರಿತು ಚರ್ಚೆ.
4) ಕಲಿಕಾ ಬಲವರ್ಧನೆ ಕುರಿತು ಮಾಹಿತಿ ನೀಡುವುದು.
5) 2024-25 ರ SAP & SDP ತಯಾರಿಸುವ ಕುರಿತು ಚರ್ಚೆ.
6) ಸ್ಥಳೀಯ ಸಂಪನ್ಮೂಲಗಳ ಬಳಕೆ ಮಾಡುವ ಕುರಿತು ಚರ್ಚೆ.
7) 2 ನೇ ಸಮುದಾಯತ್ತ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸುವುದು.
ಮುಖ್ಯ ಸೂಚನೆ : ಮೇಲಿನ ಮಾಹಿತಿಯು SSK ಇಲಾಖೆ ಹೊರಡಿಸಿದ ಸುತ್ತೋಲೆ ದಿನಾಂಕ 12.02.2024 ರ ಪ್ರಕಾರ ಇರುತ್ತದೆ.
ಮಾಹಿತಿಗಾಗಿ : ಸಂತೋಷ ಶಿಕ್ಷಣ
SSK ಇಲಾಖೆ ಹೊರಡಿಸಿದ ದಿನಾಂಕ : 12.02.2024 ಸುತ್ತೋಲೆ Click here to Download
ನಮೂನೆಗಳು :
1) ನಮೂನೆ - ಅ ಅನುದಾನದ ಉಪಯೋಗತಾ ಪ್ರಮಾಣ ಪತ್ರ Download
2) SDMC ಸದಸ್ಯರ ಹಾಜರಾತಿ ಸಹಿ ವಹಿ Download
3) ಪೋಷಕರ ಹಾಜರಾತಿ ಸಹಿ ವಹಿ Download
(ಈ ನಮೂನೆಗಳನ್ನು ಮಾದರಿಗಾಗಿ ಕೊಡಲಾಗಿದೆ. ನಿಮ್ಮ ಶಾಲೆಗೆ ತಕ್ಕಂತೆ ನಮೂನೆಗಳನ್ನು ಹಾಕಿಕೊಳ್ಳಬಹುದು.)