"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ಏಕ್‌ ಭಾರತ್‌ ಶ್ರೇಷ್ಠ ಭಾರತ್‌ (100 ದಿನಗಳ ಓದುವ ಅಭಿಯಾನದಡಿಯಲ್ಲಿ)



 ಏಕ್‌ ಭಾರತ್‌ ಶ್ರೇಷ್ಠ ಭಾರತ್‌ (100 ದಿನಗಳ ಓದುವ ಅಭಿಯಾನದಡಿಯಲ್ಲಿ)

ಆತ್ಮೀಯ ಮುಖ್ಯ ಶಿಕ್ಷಕರೇ ಹಾಗೂ ವೃತ್ತಿ ಬಾಂಧವರೇ 

        2024-25 ನೇ ಸಾಲಿನಲ್ಲಿ 100 ದಿನಗಳ ಓದುವ ಅಭಿಯಾನವನ್ನು ದಿನಾಂಕ 04-11-2024 ರಿಂದ ಅನುಷ್ಠಾನ ಮಾಡಿದ್ದೇವೆ. ಈ ಕಾರ್ಯಕ್ರಮದಡಿಯಲ್ಲಿ 9 ನೇ ವಾರ ವಿಭಾಗ 3 ರಲ್ಲಿ ಅಂದರೆ 6 ರಿಂದ 8 ನೇ ತರಗತಿ ಮಕ್ಕಳಿಗಾಗಿ "ಏಕ್‌ ಭಾರತ್‌ ಶ್ರೇಷ್ಠ ಭಾರತ್ ಕ್ಕಾಗಿ ಓದು" ಎಂಬ ಶೀರ್ಷಿಕೆಯಡಿಲ್ಲಿ ಚಟುವಟಿಕೆ ನಿರ್ವಹಿಸಬೇಕು. ಆದ್ದರಿಂದ ದಿನಾಂಕ 15-06-2024 ರ ಸುತ್ತೋಲೆ ಪ್ರಕಾರ ಪ್ರಸಕ್ತ ಸಾಲಿನಲ್ಲಿ "ಏಕ್‌ ಭಾರತ್‌ ಶ್ರೇಷ್ಠ ಭಾರತ್ " ಕಾರ್ಯಕ್ರದಡಿಯಲ್ಲಿ ಪಾಲುದಾರ ರಾಜ್ಯಗಳಾದ ಕರ್ನಾಟಕ ಹಾಗೂ ಉತ್ತರಾಖಂಡ ರಾಜ್ಯಗಳು ಪರಸ್ಪರ ಸಾಂಸ್ಕೃತಿಕ ಮತ್ತು ಇತರೆ ಅಂಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 100 ದಿನಗಳ ಓದುವ ಅಭಿಯಾನದ 9 ನೇ ವಾರದ "ಏಕ್‌ ಭಾರತ್‌ ಶ್ರೇಷ್ಠ ಭಾರತ್ ಕ್ಕಾಗಿ ಓದು" ಚಟುವಟಿಕೆಯಲ್ಲಿ ಮಕ್ಕಳಿಗೆ ಉತ್ತರಾಖಂಡ ರಾಜ್ಯದ ಪರಿಚಯ, ಸಾಂಸ್ಕೃತಿಕ ಪರಿಚಯ, ರಾಜಕೀಯ ಪರಿಚಯ, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳ ಪರಿಚಯ, ಉಡುಗೆ ತೊಡುಗೆ ಹೀಗೆ ಉತ್ತರಾಖಂಡದ ಸಂಪೂರ್ಣವಾದ ಮಾಹಿತಿಯನ್ನು ಮಕ್ಕಳಿಗೆ ನೀಡುವುದು. ಹಾಗೂ ಸಾಹಿತ್ಯವನ್ನು ಓದಲು ಪ್ರೇರೇಪಿಸುವುದು.

ಆದ್ದರಿಂದ ಉತ್ತರಾಖಂಡದ ಸಂಕ್ಷೀಪ್ತ ಮಾಹಿತಿಯು ನಿಮಗಾಗಿ ಇಲ್ಲಿ ಕೊಡಲಾಗಿದೆ. ಇಲ್ಲಿ ಪ್ರಕಟಿಸಲಾದ ಮಾಹಿತಿಯು ಗೂಗಲ್‌ ಹಾಗೂ ಯ್ಯೂಟೂಬ್‌ ನಿಂದ ಪಡೆಯಲಾಗಿದೆ.

 

ಸಂತೋಷ ಶಿಕ್ಷಣ Youtube Channel

ಏಕ ಭಾರತ ಶ್ರೇಷ್ಠ ಭಾರತ ಪರಿಚಯಾತ್ಮಕ ಕಾರ್ಯಕ್ರಮ

                                                                                                        

ಬಂಧುಗಳೇ ನಮ್ಮ ಸ್ಟುಡಿಯೋದಲ್ಲಿ ಇವತ್ತು ಏಕ್ ಭಾರತ್ ಶ್ರೇಷ್ಠ ಭಾರತ ಕುರಿತು ಚರ್ಚೆ ಮಾಡಲು ನಾವೆಲ್ಲರೂ ಸೇರಿದ್ದೇವೆ . ಈ ಕಾರ್ಯಕ್ರಮ- ವನ್ನು ಇಲಾಖೆಯ ಆದೇಶದಂತೆ ನಾವು ಈ ವರ್ಷ ಅನುಷ್ಠಾನಗೊಳಿಸಬೇಕಾಗಿದೆ. ಬಂಧುಗಳೇ ಮಾನ್ಯ ಪ್ರಧಾನಮಂತ್ರಿಯವರು ಸರ್ದಾರ್ ವಲ್ಲಭಾಯಿ ಪಟೇಲರ ಜನ್ಮ ವಾರ್ಷಿಕೋತ್ಸವದ “ಏಕ್ತಾ ದಿವಸ” ದಿನವಾದ ಅಕ್ಟೋಬರ್ 31, 2015 ರಂದು ಈ ಕಾರ್ಯಕ್ರಮವನ್ನು ಪರಿಚಯಿಸಿದರು. ಅಂದರೆ ಈ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷ ಭಾರತದ ಎರಡು ರಾಜ್ಯಗಳು ಪರಸ್ಪರ ಭೌಗೋಳಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಅದರಂತೆ ಈ ವರ್ಷ ಅಂದರೆ 2024 -25ರಲ್ಲಿ ಕರ್ನಾಟಕ  ಹಾಗೂ ಉತ್ತರಾಖಂ ರಾಜ್ಯಗಳು ಪರಸ್ಪರ ತಮ್ಮ ತಮ್ಮ ಭೌಗೋಳಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಎರಡು ರಾಜ್ಯಗಳು ತಮ್ಮ  ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಂದರೆ ಉತ್ತರಾಖಂಡ ರಾಜ್ಯವು ತಮ್ಮ ರಾಜ್ಯದ ಶಾಲಾ ಮಕ್ಕಳಿಗೆ ಕರ್ನಾಟಕದ ಸಂಸ್ಕೃತ ಪರಿಚಯ ಮಾಡಿಕೊಡುವಂತೆ ನಮ್ಮ ರಾಜ್ಯದಲ್ಲಿ ಪ್ರತಿ ಶಾಲೆಗಳಲ್ಲಿ ಉತ್ತರಾಖಂಡದ ಭೌಗೋಳಿಕ ಸಾಂಸ್ಕೃತಿಕ ಆಚಾರ ವಿಚಾರ ಸಂಪ್ರದಾಯ ಮುಂತಾದವುಗಳನ್ನು ಪರಿಚಯಿಸು ಕೊಡುವುದೇ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ.

ಏಕ್ ಭರತ್ ಶ್ರೇಷ್ಠ ಕಾರ್ಯಕ್ರಮದ ಹೆಸರೆ ಹೇಳುವಂತೆ ಇದು ವಿವಿದತೆಯಲ್ಲಿ ಏಕತೆಯನ್ನು ಸಾರುವ ಒಂದು ವಿಶಿಷ್ಠ ಕಾರ್ಯಕ್ರಮವಾಗಿದೆ ವಿದ್ಯಾರ್ಥಿಗಳು ಎರಡು ರಾಜ್ಯಗಳ ಸಾಂಸ್ಕೃತಿ ವಿಚಾರ ಆಚಾರ ಸಂಪ್ರದಾಯಗಳನ್ನು ತಿಳಿದುಕೊಳ್ಳುವರು ಜೊತೆಗೆ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಹೊಂದುವರು.

ಈ ವರ್ಷ ನಾವು ಉತ್ತರಾಖಂಡ ರಾಜ್ಯ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬೇಕಾಗಿದೆ.  ಇದಕ್ಕಾಗಿ ಶಾಲೆಗಳಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ ಕ್ಲಬ್ ಗಳನ್ನು ರಚಿಸಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸುವುದರ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು ಆಗಿದೆ. ಹಾಗೂ ಉತ್ತಮ ಅಭ್ಯಾಸ & ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ರಾಜ್ಯಗಳ ನಡುವೆ ಕಲಿಕೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಸರ್  ಹಾಗೂ ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಉತ್ತರಾಖಂಡ ರಾಜ್ಯ ಒಂದೊಂದೆ ಅಂಶವನ್ನು ಹೇಳುವುದು. ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯೇತರ ಚಟುವಟಿಕಗಳಾಗಿ ಕವನ ವಾಚನ ಭಾಷಣ ಸ್ಪರ್ಧೆ, ನೃತ್ಯ, ಚಿತ್ರಕಲೆ, ರಸಪ್ರಶ್ನೆ ಮುಂತಾದ ಚಟುವಟಿಕೆಗಳ ಮೂಲಕ ಪರಿಚಯಿಸುವುದು. ವಾರಕ್ಕೆ ಒಂದು ಅವಧಿಯಾದರೂ ಉತ್ತರಾಖಂಡದ ಬೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಚಯವನ್ನು ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಸರ್.‌

ಒಟ್ಟಾರೆಯಾಗಿ ಮಕ್ಕಳಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಹಾಗಾದರೆ ಮೇಡಂ ಈ ಕಾರ್ಯಕ್ರಮದ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸುವುದಾದರೆ ಯಾವೆಲ್ಲ ಅಂಶಗಳನ್ನು ಪರಿಚಯಿಸಬಹುದು.

ಉತ್ತರಾಖಂಡದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಪರಿಚಯ :

 ಉತ್ತರಾಖಂಡ ವಿಶಿಷ್ಟ ಸಂಸ್ಕೃತಿಕ ಪರಿಸರವನ್ನು ಹೊಂದಿದ ರಾಜ್ಯವಾಗಿದೆ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು ಸಾಂಸ್ಕೃತಿಕ ನೃತ್ಯ ಉಡುಗೆ ತೊಡೆಗೆ ಸಂಗೀತ ಇವೆಲ್ಲವೂ ವಿಶಿಷ್ಟವಾಗಿದೆ ಮತ್ತು ಸುಂದರವಾದ ಗರ್ವಾಲ್ ಮತ್ತು ಕುಮನ್ ಎಂಬ ಎರಡು ಪ್ರದೇಶಗಳನ್ನು ಹೊಂದಿದೆ ಹಾಗೂ ಇಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಯಾತ್ರೆಗಾಗಿ ಅನೇಕ ಪ್ರವಾಸಿಗರು ನಿರಂತರ ಭೇಟಿ ನೀಡುತ್ತಿರುತ್ತಾರೆ.

ಪ್ರಮುಖ ಪ್ರೇಕ್ಷಣೀಯ ಸ್ಥಳಗಳು

ರಿಷಿಕೇಶ್ : ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಪವಿತ್ರ ಗಂಗಾ ನದಿ ಹರಿಯುವ ಪವಿತ್ರ ಸ್ಥಳ ಇದು ಆಧ್ಯಾತ್ಮಿಕ ತೀರ್ಥ ಯಾತ್ರೆಗೆ ಹೇಳಿ ಮಾಡಿಸಿದ ಸ್ಥವಾಗಿದೆ.

ಡೆಹ್ರಾಡೂನ್ : ಹಿಮಾಲಯದ ತಪ್ಪಲಿನಲ್ಲಿರುವ ಪ್ರಮುಖ ನಗರಗಳಲ್ಲಿ ಇದು ಕೂಡ ಒಂದು ಇಲ್ಲಿನ ಜಲಪಾತಗಳು ನಯನ ಮನೋಹರ ದೃಶ್ಯಗಳಿಂದ ಕೂಡಿವೆ.ಇಲ್ಲಿನ ಶಾರದಾ ಎಂಬ ಪ್ರದೇಶವು ಸಾವಿರ ಪಟ್ಟು ವಸಂತ ಎಂಬ ಆಕರ್ಷಣೀಯ ತಾವಾಗಿದೆ.

ನೈನಿತಾಲ : ಇದೊಂದು ರಮಣೀಯ ಗಿರಿಧಾಮ ಇಲ್ಲಿ ಹಲವಾರು ಸರೋವರಗಳ ನೋಟ ನಯನ ಮನೋಹರ ಸುತ್ತಲೂ ಹಿಮದಿಂದ ಆವೃತವಾದ 7 ಶಿಖರಗಳಿಂದ ಸುತ್ತುವರಿದ ಪ್ರವಾಸಿ ತಾಣವಾಗಿದೆ ಈ ಸ್ಥಳವನ್ನು ನೋಡಲು ನಯನ ಮನೋಹರ.

ಔಲಿ : ಭಾರತದ ಅತ್ಯುತ್ತಮ ತಾಣಗಳಲ್ಲಿ ಒಂದೊಂದು ಪ್ರಸಿದ್ಧಿ ಪಡೆದ ಈ ಒಂದು ನಗರದಲ್ಲಿ ಅತ್ಯಂತ ಸುಂದರವಾದ ನಗರವಾಗಿದೆ ಛತ್ರ ಕುಂಡ, ನಂದಾ ದೇವಿ, ಕೋನಿ ಫರಸ್‌ ಮುಂತಾದ ರಮಣೀಯ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ಹಿಮಾಲಯ ಶ್ರೇಣಿಗಳ ವಿಹಂಗಮ ನೋಟ ಮಧುಚಂದ್ರ ತಾವಾಗಿದೆ.

ಹರಿದ್ವಾರ : ಉತ್ತರಾಖಂಡದ ಪ್ರಸಿದ್ಧ ತೀರ್ಥಯಾತ್ರೆ ಮಾಡುವಂತಹ ಒಂದು ಸುಂದರ ಸ್ಥಳ ಹರಿದ್ವಾರ. ಇದು  ದೇವಾಲಯ ಮತ್ತು ಆಶ್ರಮಗಳಿಗೆ ಹೆಸರುವಾಸಿಯಾದ ಈ  ನಗರದಲ್ಲಿ  12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಉತ್ಸವವು ಪ್ರಸಿದ್ಧ ಉತ್ಸವವಾಗಿದೆ

ಅಲ್ಲದೆ ಇನ್ನು ಅನೇಕರ ರಮಣೀಯ ನಯನ ಮನೋಹರವಾದ ಪ್ರೇಕ್ಷಣೀಯ ಸ್ಥಳಗಳಾದ ಜಿಮ್‌ ಕಾರ್ಬೇಟ್ ರಾಣಿ ಖೇತ,  ಮಸ್ಸೂರಿ, ಬದರಿನಾಥ ಕೇದಾರನಾಥ ಇನ್ನು ಅನೇಕ ನಯನ ಮನೋಹರ ಪ್ರೇಕ್ಷಣೀಯ ಸ್ಥಳಗಳನ್ನು ನಾವಿಲ್ಲಿ ನೋಡಬಹುದು ಹಾಗೂ ಇವುಗಳನ್ನು ಮಕ್ಕಳಿಗೆ ಪರಿಚಯಿಸಿ ಕೊಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸರ್

 ಉತ್ತರಾಖಂಡವು ಕೇವಲ ಒಂದು ಪದಗಳಲ್ಲಿ ವರ್ಣಿಸುವಂತಹ ರಾಜ್ಯವಲ್ಲ ನೈಸರ್ಗಿಕ ಸೌಂದರ್ಯ ಅಗಾಧವಾದದ್ದು ಸರ್ ಮೇಡಂ ಹೇಳಿದಾಗೆ ಈ ಪ್ರೇಕ್ಷಣೀಯ ಸ್ಥಳಗಳಲ್ಲಿ ನಾವು ನೋಡಬಹುದಾದಂತ ದೇವಾಲಯಗಳ ಬಗ್ಗೆ ತಾವು ವಿವರಿಸಬಹುದು.

ಉತ್ತರಾಖಂಡದ ಪ್ರಮುಖ ಧಾರ್ಮಿಕ ಸ್ಥಗಳ ಪರಿಚಯ :

 ಉತ್ತರಾಖಂಡದ ಭೂ ದೃಶ್ಯವನ್ನು ವಿವರಿಸಲು ಒಂದೇ ಒಂದು ಪದದಲ್ಲಿ ಸಾಧ್ಯವಿಲ್ಲ ಇಲ್ಲಿನ ಸೌಂದರ್ಯ ಲ್ಲಿನ ದೇವಾಲಯಗಳಲ್ಲಿ ಕಾಣಬಹುದು. ಉತ್ತರಾಖಂಡವು ನಿಜವಾಗಿಯೂ ದೇವರ ನಾಡು ಎಂಬುದು ಅಕ್ಷರಸಃ ಸತ್ಯ ಇಲ್ಲಿ ದೇವಸ್ಥಾನದ ಗಂಟೆಯ ಶಬ್ದ ಕೇಳದೆ ಒಂದು ಕಿಲೋಮೀಟರ್ ಕೂಡ ನಡೆಯಲು ಸಾಧ್ಯವಿಲ್ಲ ಯಮುನೋತ್ರಿ ಮತ್ತು ಗಂಗೋತ್ರಿ ಹಾಗೂ ತುಂಬಾ ಹಳೆಯ ಅಂದರೆ ನೂರು ವರ್ಷಕ್ಕೂ ಹಿಂದಿನ ಕಾಲದ ದೇವಾಲಯಗಳಿವೆ. ಅಲ್ಲದೆ ಹರಿದ್ವಾರ ರಿಷಿಕೇಶ ನಗರಗಳಲ್ಲಿ ಅತ್ಯಂತ ಹಳೆಯದಾದ ಪೌರಾಣಿಕ ದೇವಾಲಯಗಳನ್ನು ನೋಡಲು ನಯನ ಮನೋಹರ ದೃಶ್ಯ

ಬದ್ರಿನಾಥ ದೇವಾಲಯ ವಿಷ್ಣುವಿನ ದೇವಾಲಯ ಸಮುದ್ರಮಟ್ಟದಿಂದ ಸುಮಾರು 10 ಸಾವಿರ ಅಡಿ ಎತ್ತರದಲ್ಲಿರುವ ಈ ದೇವಾಲಯದಲ್ಲಿ ಗರ್ಭಗೃಹ, ದರ್ಶನ ಮಂಟಪ ಮತ್ತು ಸಭಾಮಂಟಪ ಎಂಬ ಮೂರು ಭಾಗಗಳಿವೆ ಇವುಗಳನ್ನು ದರ್ಶನ ಮಾಡುವುದೇ ಸೌಭಾಗ್ಯ.

ಕೇದಾರನಾಥ ದೇವಾಲಯ ಒಂದು ಸಾವಿರ ವರ್ಷಗಳಿಗಿಂತಲೂ ಹಳೆಯದು ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ನಿರ್ಮಿಸಿದರು. ಇದರ ವಾಸ್ತು ಶೈಲಿ ಬಹಳ ಸೂಕ್ಷ್ಮವಾಗಿದ್ದು ದೇವಾಲಯದ ಗೋಡೆಗಳಲ್ಲಿ ಹಿಂದೂ ದೇವತೆಗಳ ಪೌರಾಣಿಕ ಕಥೆಗಳನ್ನು ನಾವು ನೋಡಬಹುದು

ಗಂಗೋತ್ರಿ ದೇವಾಲಯವು ಭಾಗಿರತಿಯ ನದಿಯ ದಡದಲ್ಲಿ ಇದೆ ಗಂಗಾದೇವಿಯನ್ನು ಪೂಜಿಸಲಾಗುತ್ತದೆ ಇದನ್ನು ಮೂರು ಶತಮಾನಗಳ ಹಿಂದೆಯೇ ಗೂರ್ಖಾಸ್ ಕಮಾಂಡರ್ ಅಮರ ಸಿಂಗ್ ಧಾಪಾ ನಿರ್ಮಿಸಿದನು.

ಯಮುನೋತ್ರಿ ದೇವಾಲಯದಲ್ಲಿ ಯಮುನಾ ದೇವಿಯನ್ನು ಪೂಜಿಸಲಾಗುತ್ತದೆ. 1839 ರಲ್ಲಿ ತೆಹ್ರಿಯ ರಾಜಾ ಸುದರ್ಶನ್ ಶಾ ನಿರ್ಮಿಸಿದನು. ಇಲ್ಲಿನ ವಿಶೇಷತೆ ಎಂದರೆ ಯಮುನಾ ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ.

ರುದ್ರನಾಥ ದೇವಾಲಯ ಮಂದಾಕಿನಿ ಮತ್ತು ಅಲಕನಂದ ನದಿಗಳ ಸಂಗಮದಲ್ಲಿ ಕಂಡುಬರುವ ಈ ದೇವಾಲಯದಲ್ಲಿ ಶಿವನ ಮೂರ್ತಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ಹೋಗಬೇಕಾದರೆ 18 ಕಿಲೋಮೀಟರ್ ಕಷ್ಟಕರವಾದ ಚಾರಣವನ್ನು ಮಾಡಬೇಕು ಆದಗ್ಯೂ ಕೂಡ ಈ ದೇವಾಲಯವನ್ನು ತಲುಪಿದಾಗ ಸ್ವರ್ಗಕ್ಕೆ ಹೋದಂತಹ ಒಂದು ಅನುಭವ ನಮಗೆ ಆಗುತ್ತದೆ ಮೂರು ಕುಂಡಗಳನ್ನು ನೋಡಬಹುದು ಸೂರ್ಯಕುಂಡ ಚಂದ್ರಕುಂಡ ತಾರಕುಂಡ

ನೈನಾ ದೇವಿಯ ದೇವಾಲಯ

ಈ ದೇವಾಲಯದ ವಿಶೇಷವೂ ಬಹಳ ಅಗಾಧವಾದದ್ದು ನೈನಾದೇವಿ ದೇವಸ್ಥಾನವು ಜನಪ್ರಿಯ ರಜಾ ದಿನದ ತಾವಾಗಿದೆ ಈ ದೇವಾಲಯವು ನೈನಿತಾಲದಲ್ಲಿ ಬರುತ್ತದೆ ಒಂದು ದಂತಕಥೆಯ ಪ್ರಕಾರ ಸತಿಯು ತನ್ನನ್ನು ತಾನು ಸುಟ್ಟುಕೊಂಡ ನಂತರ ಆಕೆಯ ಪತಿ ಶಿವನು ತುಂಬಾ ಕೋಪದಲ್ಲಿ ತಾಂಡವ ಮಾಡಲು ಪ್ರಾರಂಭಿಸಿದನು ಭಗವಾನ್ ವಿಷ್ಣು ಅವನನ್ನು ತಡೆಯಲು ಬಂದಾಗ ಸತಿಯ ದೇಹ 52 ತುಂಡುಗಳಾಗಿ ಕತ್ತರಿಸಿ ಭೂಮಿಯ ಮೇಲೆ ಬಿಸಾಕಿದನು. ಭೂಮಿಯ ಮೇಲೆ ಬಿದ್ದ ಸ್ಥಳಗಳನ್ನು ಶಕ್ತಿಪೀಠಗಳೆಂದು ಕರೆಯಲಾಗುತ್ತದೆ. ಹಾಗೂ ಅವಳ ಕಣ್ಣುಗಳು ಬಿದ್ದ ಸ್ಥಳವನ್ನು ನೈನಿತಾಲ್ ಎಂದು ಕರೆಯಲಾಗುತ್ತದೆ. ನೈನಾ ಅಂದರೆ ಕಣ್ಣುಗಳು ಆದ್ದರಿಂದ ಇಲ್ಲಿ ನೈನಾ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ.

ಉತ್ತರಾಖಂಡದ ಸಾಂಸ್ಕೃತಿಕ  ಪರಿಚಯ :

 ಉತ್ತರಾಖಂಡವು  ಸಂಸ್ಕೃತಿಕವಾಗಿ ಬಹಳಷ್ಟು ಸಿರಿವಂತಿಕೆಯನ್ನು ಹೊಂದಿದೆ ಇಲ್ಲಿ ಸುಂದರವಾದ ಗರ್ವಾಲಿ ಮತ್ತು ಕುಮವೋನಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಗರ್ವಾಲಿ ಸಂಸ್ಕೃತಿಯು ಇಲ್ಲಿನ ಪ್ರಮುಖ ಆಚರಣೆ ಆಗಿದೆ ಅಂದರೆ ಪ್ರಮುಖ ಭಾಷೆಯಾಗಿದೆ ಇದು ಚೌನ್ಸಾರಿ, ಮರ್ಜಿ, ಅವಧಿ, ಸೈಲಾನಿ ಸೇರಿದಂತೆ ಹಲವಾರು ಉಪಭಾಷೆಗಳನ್ನು ಹೊಂದಿದ ಒಂದು ಭಾಷೆ .

ಕುಮವೋನಿ ಜನರು ಕುಮೈವ, ಗಂಗೊಲೀ, ಸಿರಾಲಿ ಸೇರಿ ಸುಮಾರು ಹದಿಮೂರು ಉಪಭಾಷೆಗಳನ್ನು ಹೊಂದಿರುವ ಇಲ್ಲಿ ಜನ  ಮಾತನಾಡುವಂತಹ ಒಂದು ಭಾಷೆಯಾಗಿದೆ.

ಉತ್ತರಾಖಂಡದಲ್ಲಿ ಜಾನಪದ ನೃತ್ಯ ಮತ್ತು ಸಂಗೀತವನ್ನು ನೆನಪಿಸುವುದಾದರೆ

ಬದರನಾಟಿ ಡೆಹ್ರಾಡೂನ್ ಜಿಲ್ಲೆಯ ಜೌನ್ಸರ ಭವಾರ ಪ್ರದೇಶದ ಜನಪ್ರಿಯ ನೃತ್ಯವಾಗಿದೆ.

ಲಾಂಗ್ವಿರ್ ನೃತ್ಯವು ಪುರುಷರು ಮಾಡುವಂತಹ ಚಮತ್ಕಾರಿ ನೃತ್ಯ ಪ್ರಕಾರವಾಗಿದೆ.

ಪಾಂಡವು ನೃತ್ಯವು ಸಂಗೀತ ಮತ್ತು ನೃತ್ಯದ ರೂಪದಲ್ಲಿ ಮಹಾಭಾರತದ ನಿರೂಪಣೆಯಾಗಿದೆ.

ದುರಂಗ್ ಮತ್ತು ದುರಿಂಗ್ ಭೋಟಿಯ ಬುಡಕಟ್ಟು ಜನಾಂಗದ ಜನಪ್ರಿಯ ಜಾನಪದ ನೃತ್ಯವಾಗಿದೆ.

 

ಇನ್ನು ಇಲ್ಲಿಯ ಜಾನಪದ ಹಾಡುಗಳು ನಮ್ಮ ಕಿವಿಗೆ ಬಹಳಷ್ಟು ಇಂಪನ್ನು ನೀಡುವಂತಹ ಹಾಡುಗಳು

ವಸಂತ ಋತುವನ್ನು ಸ್ವಾಗತಿಸಲು ಬಸಂತಿ ಹಾಡನ್ನು ಹಾಡಲಾಗುತ್ತದೆ

ಪ್ರೇತಗಳ ಆರಾಧನೆ ಸಮಯದಲ್ಲಿ ಜಾಗರುಗಲ್ ಹಾಡನ್ನು ಹಾಡಲಾಗುತ್ತದೆ

ಕುರುಬರ ಪ್ರೀತಿ ಮತ್ತು ತ್ಯಾಗದ ಕುರಿತಾಗಿ  ಬಾಜು ಬಂದ ಎಂಬ ವಿಶಿಷ್ಠ ಹಾಡನ್ನು ಹಾಡುತ್ತಾರೆ.

ಪತಿಯಿಂದ ದೂರವಾದ ಮಹಿಳೆಯು ತನ್ನ ದುಃಖವನ್ನು ಖುದೇದ ಹಾಡಿನ ಮೂಲಕ ವ್ಯಕ್ತಪಡಿಸುತ್ತಾಳೆ

ಇನ್ನು ಇಲ್ಲಿಯ ಸಾಂಪ್ರದಾಯಿಕ ಉಡುಪುಗಳನ್ನು ನಾವು ನೆನಪಿಸಿಕೊಳ್ಳುವುದಾದರೆ

ಪುರುಷರು ಬಹುತೇಕ ಎಲ್ಲರೂ ಧೋತಿ ಹಾಗೂ ವಿವಿಧ ಬಣ್ಣದ ಕುರ್ತಾಗಳನ್ನು ಧರಿಸುತ್ತಾರೆ ತಲೆ ಮೇಲೆ ಪೇಟ ಕೂಡ ಧರಿಸುತ್ತಾರೆ ಅಲ್ಲದೆ ಕುರ್ತ ಪೈಜಾಮ್ ಕೂಡ ಸಾಮಾನ್ಯ ಉಡುಗಿಯ ಆಗಿದೆ.

ಇನ್ನು ಇಲ್ಲಿಯ ಮಹಿಳೆಯರು ಘಾಗ್ರಿ ಎಂಬ ಉದ್ದನೆಯ ಸ್ಕರ್ಟ್ ಧರಿಸುವುದು ಸಾಮಾನ್ಯ

ಸುಂದರವಾದ ಚೋಲಿ ಕುಪ್ಪಸ ಹೊಂದಿದ ಉಡುಪು ಧರಿಸುವರು ಮತ್ತು ಓರ್ನಿಯನ್ನು ಸಾಮಾನ್ಯವಾಗಿ ಸೊಂಟಕ್ಕೆ  ಸುತ್ತಿಕೊಳ್ಳುತ್ತಾರೆ ಹೀಗೆ ಇಲ್ಲಿನ ಸಂಸ್ಕೃತಿಯು ನಮ್ಮನ್ನು ಸೆಳೆಯುತ್ತದೆ ಈ ಸಂಸ್ಕೃತಿಯ ಬಗ್ಗೆ ನಾವು ಮಕ್ಕಳಿಗೆ ಪರಿಚಯಿಸುವುದರ ಮೂಲಕ ಉತ್ತರಾಖಂಡದ ಸಾಂಪ್ರದಾಯ ಆಚಾರ ವಿಚಾರ ಸಂಸ್ಕೃತಿಕ ಮುಂತಾದ ಅಂಶಗಳ ಅರಿವು ಮೂಡಿಸುವುದು.

 ಉತ್ತರಾಖಂಡದ ಸಂಸ್ಕೃತಿ ಸಂಪ್ರದಾಯ ತುಂಬಾ ವಿಶಿಷ್ಟವಾಗಿದೆ ಸರ್‌ ದೇವಾಲಯಗಳ ಬಗ್ಗೆ ತಿಳಿಸಿದ್ದಿರಿ ಇನ್ನು ಇಲ್ಲಿ ಆಚರಿಸುವ ಹಬ್ಬಗಳು ಕೂಡ ಅಷ್ಟೇ ವಿಶೇಷತೆಗಳಿಂದ ಕೂಡಿದೆ ಸರ್ ನಮ್ಮ ಕರ್ನಾಟಕದಲ್ಲಿ ದಸರಾ ಹಬ್ಬ ಸಂಕ್ರಾಂತಿ ಹಬ್ಬ ಸಿಗಿ ಹುಣ್ಣಿಮೆ ಹೀಗೆ ವಿಶೇಷ ಹಬ್ಬಗಳನ್ನು ಆಚರಿಸುತ್ತವೆ ಅದೇ ರೀತಿ ಉತ್ತರಾಖಂಡದಲ್ಲಿ ಯಾವ ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ.

ಉತ್ತರಾಖಂಡದ ಪ್ರಮುಖ ಹಬ್ಬಗಳ ಪರಿಚಯ :

ನಮ್ಮಲ್ಲಿ ಹೇಗೆ ನಾವು ವಿಶೇಷವಾದ ಹಬ್ಬಗಳನ್ನ ಆಚರಿಸುತ್ತೇವೆ ಅದೇ ರೀತಿ ಉತ್ತರಾಖಂಡದಲ್ಲಿ ಕೂಡ ಅನೇಕ ಸಂಸ್ಕೃತಿಕ ಹಬ್ಬಗಳನ್ನ ಪೌರಾಣಿಕ ಹಬ್ಬಗಳನ್ನು ಆಚರಿಸುತ್ತಾರೆ ಉದಾಹರಣೆಗಾಗಿ ನೋಡುವುದಾದರೆ

ಕುಂಭಮೇಳ :

ಇದು ಉತ್ತರಾಖಂಡದಲ್ಲಿ ಆಚರಿಸುವ ಒಂದು ವಿಶೇಷವಾದ ಉತ್ಸವ ಅತ್ಯಂತ ದೊಡ್ಡ ಹಾಗೂ ಜನಪ್ರಿಯ ಉತ್ಸವವಾಗಿದೆ. ಈ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಗಂಗಾ ಸ್ನಾನ ಇದು ಮೂರು ತಿಂಗಳುಗಳ ಕಾಲ ನಡೆಯುವಂತ ಒಂದು ಉತ್ಸವ ಇದನ್ನು ಅಲಹಾಬಾದ ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಇವುಗಳ ಮಧ್ಯೆ ನಾಲ್ಕು ವರ್ಷಗಳಿಗೊಮ್ಮೆ ಅಂದರೆ ಒಂದೇ ಸ್ಥಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವಂತಹ ಹಬ್ಬವಾಗಿದೆ ಆದ್ದರಿಂದ ಹರಿದ್ವಾರದಲ್ಲಿ ಹಬ್ಬವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ

ಬಸಂತ ಪಂಚಮಿ : ಬಸಂತ ಪಂಚಮಿ ಎಂಬುವುದು ವಸಂತ ಋತುವಿನ ಆಗಮನವನ್ನು ಸಂತಸದಿಂದ ಬರಮಾಡಿಕೊಳ್ಳುವ ಹಬ್ಬವಾಗಿದೆ. ಚಳಿಗಾಲದ ಅಂತ್ಯದಲ್ಲಿ ಆಚರಿಸುವ ಹಬ್ಬ ಸ್ಥಳೀಯರು ಹಳದಿ ಬಟ್ಟೆಗಳನ್ನು ಧರಿಸಿ ಆಚರಿಸುತ್ತಾರೆ ಇಲ್ಲಿನ ಜನರು ಜುಮೇಲಿಯಾ ನೃತ್ಯವನ್ನು ಮಾಡಿ ಹಾಗೂ ಗಾಳಿಪಟವನ್ನು ಹಾರಿಸಿ ಸಂಭ್ರಮವನ್ನು ಪಡುತ್ತಾರೆ.

ಭಿತೌಲಿ ಮತ್ತು ಹರೇಲಾ ಹಬ್ಬ

ರೇಲಾ ಹಬ್ಬವನ್ನು ಮಳೆಗಾಲದ ಆರಂಭದಲ್ಲಿ ಆಚರಿಸುವ ಒಂದು ವಿಶೇಷ ಹಬ್ಬವಾಗಿದೆ ಕುಮಾನಿ ಜನಾಂಗಕ್ಕೆ ಸೇರಿದ ಜನರು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ ಅದೇ ರೀತಿ ಬಿತೌಲಿ ಹಬ್ಬವನ್ನು ಚೈತ್ರ ಮಾಸದಲ್ಲಿ ಆಚರಿಸುತ್ತಾರೆ ಇದು ಕೃಷಿಗೆ ಸಂಬಂಧಿಸಿದ ಹಬ್ಬವಾಗಿದೆ

ಘುಘುಟಿಯಾ ಹಬ್ಬ :

ಮಕರ ಸಂಕ್ರಾಂತಿಯ ಸಮಯದಲ್ಲಿ ಘುಘುಟಿಯ ಹಬ್ಬವನ್ನು ಕೂಡ ಆಚರಿಸುತ್ತಾರೆ ಇಲ್ಲಿನ ಸ್ಥಳೀಯರು ಹಿಟ್ಟಿನಿಂದ ಸಿಹಿ ತಿಂಡಿಗಳನ್ನು ಚಾಕು, ಕತ್ತಿ, ಕತ್ತರಿ ಹೀಗೆ ಮುಂತಾದ ವಿವಿಧ ಆಕಾರಗಳಲ್ಲಿ ತಯಾರಿಸುತ್ತಾರೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ.

ಗಂಗಾ ದಸರಾ

ನಮ್ಮ ಮೈಸೂರು ದಸರಾ ರೀತಿಯಲ್ಲಿಯೇ ಉತ್ತರಾಖಂಡದಲ್ಲಿ ಗಂಗಾ ದಸರ ಅಲ್ಲಿನ ಇನ್ನೊಂದು ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿದೆ ಪವಿತ್ರ ಗಂಗಾ ನದಿಯ ಸ್ವರ್ಗದಿಂದ ಆಗಮನವಾಗಿದೆ ಎಂಬ ಭಾವನೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ ಇದು ಹತ್ತು ದಿನಗಳ ಕಾಲ ಆಚರಿಸುವ ಹಬ್ಬವಾಗಿದೆ. ಹಾಗೂ ಇದನ್ನು ಪ್ರಮುಖವಾಗಿ ಹರಿದ್ವಾರ ಷಿಕೇಶಿ  ಪವಿತ್ರ ಸ್ಥಳಗಳಲ್ಲಿ ಆಚರಿಸುವ ಹಬ್ಬವಾಗಿದೆ. ಭಕ್ತರು ಸತತ 10 ದಿನಗಳ ಕಾಲ ತಮ್ಮ ಪಾಪವನ್ನು ತೊಡೆದು ಹಾಕಲು ಗಂಗಸ್ನಾನ ಮಾಡುವ ರೂಡಿಯಿದೆ. ಇದಕ್ಕೆ ಶುದ್ಧೀಕರಣ ಕ್ರಿಯೆ ಎಂದು ಕರೆಯುತ್ತಾರೆ ದೇವರಿಗೆ ಮುಖ್ಯವಾಗಿ ಕಲ್ಲಂಗಡಿ ಹಾಗೂ ಕಾಕಡಿ ಹಣ್ಣುಗಳ ನೈವೇದ್ಯ ವಿಶೇಷ

ಹೀಗೆ ಉತ್ತರಾಖಂಡದಲ್ಲಿ ಇನ್ನೂ ಅನೇಕ ಸಾಂಪ್ರದಾಯಿಕ ಸಾಂಸ್ಕೃತಿಕ ಹಬ್ಬಗಳಾದ ಹೋಳಿ, ಮಕರ ಸಂಕ್ರಾಂತಿ, ಫುಲ್ ದೆಯಿ, ಕಂಡಲಿ, ವಟಸಾವಿತ್ರಿ, ಪೂರ್ಣ ಗಿರಿ ಮೇಳ, ತುಪ್ಪ ಸಂಕ್ರಾಂತಿ, ಕಣ್ವರ ಜಾತ್ರೆ, ಬಿಸ್ಸು ಮೇಳ ನಂದಾದೇವಿ ಜಾತ್ರೆ ಹೀಗೆ ಹತ್ತು ಹಲವಾರು ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಾರೆ.

 ಉತ್ತರಾಖಂಡ ರಾಜ್ಯವು ಹಿಮಾಲಯ ದಾಟಿದ ಮೊದಲ ರಾಜ್ಯವಾಗಿದೆ. ಹಾಗೂ  ಪ್ರಸಿದ್ಧ ವಾಗಿದೆ ಇಲ್ಲಿನ ಭೌಗೋಳಿಕ ಅಂಶಗಳು ಸಾಂಸ್ಕೃತಿಕ ಪರಂಪರೆ ಆಚಾರ ವಿಚಾರಗಳು ಸಂಪ್ರದಾಯ ಎಲ್ಲವೂ ವಿಶೇಷತೆಯಿಂದ ಕೂಡಿದೆ ಅದೇ ರೀತಿ ನಮ್ಮ ರಾಜ್ಯವೂ ಕೂಡ ವಿಶೇಷವಾದ ಸಂಸ್ಕೃತ ಪರಂಪರೆಯನ್ನು ಹೊಂದಿದೆ. ನಮ್ಮ ರಾಜ್ಯದ ದಸರಾ ಹಬ್ಬ ಆಗಿರಬಹುದು ಯಕ್ಷಗಾನ ನೃತ್ಯ, ಇಲ್ಲಿನ ಜಾನಪದ ಹಾಡುಗಳು ನೃತ್ಯಗಳು, ದೊಡ್ಡಾಟ ಹೀಗೆ ವಿಶೇಷ ಆಚರಣೆಗಳನ್ನು ನಮ್ಮ ರಾಜ್ಯದಲ್ಲಿ ಕಾಣಬಹುದು ಎಲ್ಲಾ ಸಂಸ್ಕೃತಿಕ ಅಂಶಗಳನ್ನು ಎರಡು ರಾಜ್ಯಗಳು ಪರಸ್ಪರ ಹಂಚಿಕೊಳ್ಳುವುದರ ಮೂಲಕ ಅಂದರೆ ಶಾಲಾ ಕಾಲೇಜುಗಳಲ್ಲಿ ಉತ್ತರಾಖಂಡವು ಕರ್ನಾಟಕ ರಾಜ್ಯದ ಪರಿಚಯವನ್ನು ಹಾಗೂ ಕರ್ನಾಟಕವು ಉತ್ತರಾಖಂಡದ ಸಂಸ್ಕೃತಿಕ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡುವುದರ ಮೂಲಕ ವಿವಿಧತೆಯಲ್ಲಿ ಏಕತೆ ಹಾಗೂ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬಿತ್ತುವುದು ಅವಶ್ಯಕವಾಗಿರುತ್ತದೆ ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಆಶಯದಂತೆ ವಿನೂತನ ಕಾರ್ಯಕ್ರಮವನ್ನು ನಾವು ನಮ್ಮ ಶಾಲೆಗಳಲ್ಲಿ ಅನುಷ್ಠಾನ ಮಾಡಿ ಮಕ್ಕಳಿಗೆ ಉತ್ತರಾಖಂಡದ ಭೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಚಯಗಳನ್ನು ಮಾಡಿಕೊಡುವುದು ಅವಶ್ಯವಾಗಿದೆ ಈ ನಿಟ್ಟಿನಲ್ಲಿ ನಾವು ವಾರಕ್ಕೆ ಒಂದು ಅವಧಿಯನ್ನಾದರೂ ಉತ್ತರಾಖಂಡ ಪರಿಚಯ ಮಾಡಿಕೊಡುವುದು ಹಾಗೂ ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಒಂದು ನಿಮಿಷ ಉತ್ತರಾಖಂಡ ಪರಿಚಯವನ್ನು ದಿನಾಲು ಉತ್ತರಖಂಡದ ಒಂದೊಂದೇ ಅಂಶವನ್ನು ಮಕ್ಕಳಿಗೆ ಪರಿಚಯಿಸುವುದು ಹಾಗೂ ಹಲವಾರು ಕಾರ್ಯಕ್ರಮಗಳಾದ ನೃತ್ಯ ಭಾಷಣ ಚರ್ಚೆ ಚಿತ್ರಕಲೆ ನಾಟಕ ರಸಪ್ರಶ್ನೆ ಸ್ಪರ್ಧೆ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಮಕ್ಕಳಿಗೆ ಉತ್ತರಾಖಂಡದ ಸಾಂಸ್ಕೃತಿಕ ಪರಿಚಯವನ್ನು ಮಾಡಿಕೊಡುವುದು

ಈ ಒಂದು ಏಕ ಭರತ ಶ್ರೇಷ್ಠ ಭಾರತ ಕಾರ್ಯಕ್ರಮದ ಆಶಯವಾಗಿದೆ

ಒಟ್ಟಾರೆಯಾಗಿ ಏಕ್ ಭರತ್ ಶ್ರೇಷ್ಠ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವುದು ಉತ್ತರಾಖಂಡದ ಪರಿಚಯದೊಂದಿಗೆ ನಾವೆಲ್ಲ ಒಂದೇ,ವಿವಿಧತೆಯಲ್ಲಿ ಏಕತೆ, ಭ್ರಾತೃತ್ವ ಭಾವನೆಯನ್ನು, ಹಾಗೂ ಮತ್ತೊಂದು ಸಂಸ್ಕೃತಿಯನ್ನು ಹಾಗೂ ಭಾಷೆಯನ್ನು ಸಂಪ್ರದಾಯವನ್ನು ಗೌರಿಸುವುದನ್ನು ಮಕ್ಕಳಲ್ಲಿ ರೂಢಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸುತ್ತೋಲೆಯ ಪ್ರಕಾರ ನಾವು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಅಂತ ಹೇಳುತ್ತಾ ಈ ಒಂದು ಚರ್ಚೆಯನ್ನು ಇಲ್ಲಿಗೆ ಮುಗಿಸುತ್ತೇನೆ ಎಲ್ಲರಿಗೂ ಧನ್ಯವಾದಗಳು.